ಸಹ ಆಟಗಾರರಿಗೆ ಚಿನ್ನ ಲೇಪಿತ ಐಫೋನ್‌ ಉಡುಗೊರೆ ನೀಡಿದ ಮೆಸ್ಸಿ

Prasthutha|

ಬ್ಯೂನಸ್ ಐರಿಸ್: ಅರ್ಜೆಂಟೀನಾ ತಂಡದ ಸಹ ಆಟಗಾರರಿಗೆ ಉಡುಗೊರೆಯಾಗಿ ನೀಡಲು ಲಿಯೋನೆಲ್ ಮೆಸ್ಸಿ 24-ಕ್ಯಾರೆಟ್ ಚಿನ್ನ ಲೇಪಿತ 35 ಐ-ಫೋನ್‌ಗಳನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ.

ಕತಾರ್‌ನಲ್ಲಿ ಅರ್ಜೆಂಟೀನಾ ವಿಶ್ವಕಪ್ ಗೆದ್ದ ನಂತರ ಮೆಸ್ಸಿ ಫೋನ್‌ಗಳನ್ನು ಖರೀದಿಸಿದ್ದಾರೆ ಎಂದು InDesign Gold ನ ಮಾಲಕ ಬೆಂಜಮಿನ್ ಲಿಯಾನ್ ಹೇಳಿದ್ದಾರೆ. ಒಂದು ಫೋನ್‌ಗಳ ಬೆಲೆ 1,75,000 ಪೌಂಡ್‌ಗಳು ಎಂದು ತಿಳಿದುಬಂದಿದೆ.

- Advertisement -

ವಾಚ್‌ನಂತಹ ಮಾಮೂಲಿ ಬಹುಮಾನಗಳ ಬದಲಿಗೆ ತನ್ನ ಸಹ ಆಟಗಾರರಿಗೆ ವಿಶೇಷವಾದದ್ದನ್ನು ನೀಡಬೇಕೆಂದು ನಿರ್ಧರಿಸಿದ ಮೆಸ್ಸಿ, ಚಿನ್ನ ಲೇಪಿತ ಐ-ಫೋನ್‌ಗಳನ್ನು ಖರೀದಿಸಿದ್ದಾರೆ.

ಮೆಸ್ಸಿ ಮತ್ತು ಅವರ ತಂಡವು ಅತ್ಯಂತ ರೋಚಕ ಫೈನಲ್‌ನಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ 4-2 ಗೋಲುಗಳಿಂದ ಫ್ರಾನ್ಸ್ ಅನ್ನು ಸೋಲಿಸುವ ಮೂಲಕ ವಿಶ್ವಕಪ್ ಅನ್ನು ತನ್ನದಾಗಿಸಿಕೊಂಡಿತ್ತು.
ವಿಶ್ವಕಪ್‌ನ ಈ ಅವಿಸ್ಮರಣೀಯ ಗೆಲುವಿನ ಹಿನ್ನೆಲೆಯಲ್ಲಿ ಮೆಸ್ಸಿ ತನ್ನ ಸಹ ಆಟಗಾರರಿಗೆ ದುಬಾರಿ ಐಫೋನ್‌ಗಳನ್ನು ಖರೀದಿಸಿದ್ದಾರೆ

- Advertisement -