ಮಾಸ್ಕ್‌ಗೆ ದಂಡ ವಿಧಿಸಿ ಪೇಚಿಗೆ ಸಿಲುಕಿದ ಅಧಿಕಾರಿ!

Prasthutha|

ಮಂಗಳೂರು : ಕೊರೊನಾ ವಾರಿಯರ್‌‌ ಅಧಿಕಾರಿಯೋರ್ವರು ಮಾಸ್ಕ್‌ ಧರಿಸಿಲ್ಲವೆಂದು ಕೂಲಿ ಕಾರ್ಮಿಕನೋರ್ವನಿಗೆ ದಂಡ ವಿಧಿಸಿ ಪೇಚಿಗೆ ಸಿಲುಕಿದ ಘಟನೆ ಕಡಬದಲ್ಲಿ ನಡೆದಿದೆ.

- Advertisement -

ಕೂಲಿ ಕೆಲಸಕ್ಕೆಂದು ಹೋಗಿ ವಾಪಾಸ್ಸಾಗುತ್ತಿದ್ದ ದಂಪತಿ ಮಾಸ್ಕ್ ಧರಿಸದೆ ಕಡಬ ಬಸ್‌ ನಿಲ್ದಾಣದಲ್ಲಿ ನಿಂತಿದ್ದರು. ಇದನ್ನು ನೋಡಿದ ಕಡಬ ಪಟ್ಟಣ ಪಂಚಾಯತ್‌ನ ಕೊರೊನಾ ವಾರಿಯರ್‌‌ ಅಧಿಕಾರಿ 100 ರೂ. ದಂಡ ವಿಧಿಸಿ ಜಿಲ್ಲಾಡಳಿತದ ರಶೀದಿಯನ್ನು ನೀಡಿದ್ದು, ಈ ಸಂದರ್ಭ ಕೂಲಿ ಕಾರ್ಮಿಕ ತನ್ನಲ್ಲಿ ಹಣವಿಲ್ಲ ಎಂದು ಬೇಡಿಕೊಂಡಿದ್ದಾರೆ. ಕೊನೆಗೆ ತನ್ನ ಬಳಿ ಇದ್ದ 10 ರೂ. ಅನ್ನು ಅಧಿಕಾರಿಗೆ ನೀಡಿದ್ದಾರೆ. ಆದರೆ, 100 ರೂ. ರಶೀದಿಯನ್ನು ನೀಡಿದ್ದ ಅಧಿಕಾರಿಗೆ ಬೇರೆ ದಾರಿ ಕಾಣದೆ ತನ್ನ ಕೈಯಿಂದ 90 ರೂ. ಅನ್ನು ಸೇರಿಸಿ ಸರ್ಕಾರಕ್ಕೆ ಪಾವತಿಸಿದ್ದಾರೆ.

ಮಾಸ್ಕ್‌ ಧರಿಸದ ಕಾರಣ ನಾವು ದಂಡ ವಿಧಿಸಲೇಬೇಕಾಗುತ್ತದೆ. ಆದರೆ, ಸಾರ್ವಜನಿಕರೊಂದಿಗೆ ಹಣ ಇಲ್ಲ ಎನ್ನುವ ವಿಚಾರವು ನಮ್ಮ ಗಮನಕ್ಕೆ ಬರುವುದಿಲ್ಲ. ದಂಡ ಬರೆದು ರಶೀದಿ ನೀಡಿದರೆ, ಈ ರೀತಿಯಾದ ಸ್ಥಿತಿ ಉಂಟಾಗುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.



Join Whatsapp