ಭಾಷಣಗಳಲ್ಲಿ ಐಶ್ವರ್ಯ ರೈ ಹೆಸರು ಪ್ರಸ್ತಾಪಿಸಿ ಟೀಕೆ: ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಆಕ್ರೋಶ

Prasthutha|

ನವದೆಹಲಿ: ಹಲವು ಭಾಷಣಗಳಲ್ಲಿ ಬಾಲಿವುಡ್ ನಟಿ ಐಶ್ವರ್ಯ ರೈ ಅವರ ಹೆಸರು ಪ್ರಸ್ತಾಪಿಸಿ ಟೀಕಿಸಿದ್ದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಕಿಡಿಕಾರಿದೆ.

- Advertisement -


‘ಸಿದ್ದರಾಮಯ್ಯನವರೇ… ನಿಮ್ಮ ಬಾಸ್ ಕನ್ನಡಿಗರೊಬ್ಬರನ್ನು ಅಮಾನಿಸುವುದನ್ನು ಮುಂದುವರಿಸಿದರೆ, ನಿಮ್ಮ ಕನ್ನಡಾಭಿಮಾನವನ್ನು ಎತ್ತಿ ಹಿಡಿಯುತ್ತೀರಾ? ಅಥವಾ ಮುಖ್ಯಮಂತ್ರಿ ಕುರ್ಚಿಯನ್ನು ಕಾಪಾಡಲು ಮೌನವಾಗಿರುತ್ತೀರಾ?’ ಎಂದು ಕೇಳಿದೆ.


ಭಾರತ್ ಜೋಡೊ ನ್ಯಾಯ ಯಾತ್ರೆ’ ವೇಳೆ ‘ರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಐಶ್ವರ್ಯ ರೈನಂತಹ ಸೆಲೆಬ್ರೆಟಿಗಳು, ದೊಡ್ಡ ದೊಡ್ಡ ಉದ್ಯಮಿಗಳು ಭಾಗವಹಿಸುತ್ತಾರೆ. ಆದರೆ ಶೇ.73ರಷ್ಟು ಜನಸಂಖ್ಯೆ ಹೊಂದಿರುವ ದಲಿತ ಬುಡಕಟ್ಟು ಸಮುದಾಯಗಳ ಯಾರೊಬ್ಬರು ಅಲ್ಲಿ ಕಾಣಸಿಗುವುದಿಲ್ಲ’ ಎಂದು ರಾಹುಲ್ ಹೇಳಿದ್ದರು.

- Advertisement -

Join Whatsapp