ಗುಜರಾತ್ ಚುನಾವಣೆ: ಮೆರವಣಿಗೆಯಲ್ಲಿ ಬಂದು ಮತ ಚಲಾಯಿಸಿದ ಅವಿಭಕ್ತ ಕುಟುಂಬ!

Prasthutha|

ಅಹಮದಾಬಾದ್: ಗುಜರಾತ್‌ ವಿಧಾನಸಭೆಗೆ ಮೊದಲ ಹಂತದ ಮತದಾನ ಗುರುವಾರ ನಡೆದಿದ್ದು, ಈ ಸಂದರ್ಭದಲ್ಲಿ ಅವಿಭಕ್ತ ಕುಟುಂಬದ 60 ಮಂದಿ ಸದಸ್ಯರು ಮೆರವಣಿಗೆಯಲ್ಲಿ ಬಂದು ಮತ ಚಲಾಯಿಸಿ ಗಮನ ಸೆಳೆದಿದ್ದಾರೆ.

- Advertisement -

ಅಮ್ರೇಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುರೇಶ್ ಅವರ ಕುಟುಂಬದ ಒಟ್ಟು 60 ಜನರು ಉದ್ಯೋಗ ಮತ್ತು ಇತರ ಕಾರಣಗಳಿಂದ ದೂರ ದೂರ ಇದ್ದರೂ, ಮತಚಲಾಯಿಸಲು ಎಲ್ಲರೂ ಬಂದು ಒಟ್ಟು ಸೇರಿದ್ದಾರೆ.

ಮನೆಯಿಂದ ಮತಗಟ್ಟೆಗೆ, ಬ್ಯಾಂಡ್ ಸಹಿತ ಎಲ್ಲರೂ ಜತೆಯಾಗಿ ತೆರಳಿದ್ದಾರೆ. ಮತದಾನದ ಮಹತ್ವ ಮತ್ತು ಕುಟುಂಬದ ವಿಶೇಷತೆಯನ್ನು ಸಾರಲು ಈ ಚುನಾವಣೆಯ ಅವಕಾಶವನ್ನು ಬಳಸಿಕೊಂಡಿದ್ದೇವೆ ಎಂದು ಸುರೇಶ್ ಹೇಳಿದ್ದಾರೆ.

- Advertisement -

ಏಕಕಾಲಕ್ಕೆ ಒಂದೇ ಕುಟುಂಬದ 60 ಮಂದಿ ಸದಸ್ಯರು ಮೆರವಣಿಗೆಯಲ್ಲಿ ಬಂದು ಮತ ಚಲಾಯಿಸಿದ್ದು ಅಲ್ಲಿನ ಜನರಿಗೂ ಸಂಭ್ರಮ ಉಂಟುಮಾಡಿದೆ.

Join Whatsapp