ಮೆಹುಲ್‌ ಚೋಕ್ಸಿ ಗಡಿಪಾರು ವಿಳಂಬ | ಡೊಮಿನಿಕಾದಿಂದ ಭಾರತಕ್ಕೆ ಬರಿಗೈಲಿ ಹಿಂದಿರುಗಿದ ಅಧಿಕಾರಿಗಳ ತಂಡ

Prasthutha|

ನವದೆಹಲಿ : ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಗೆ ಬಹುಕೋಟಿ ವಂಚನೆ ಎಸಗಿರುವ ಆರೋಪಿ ಉದ್ಯಮಿ ಮೆಹುಲ್‌ ಚೋಕ್ಸಿಯನ್ನ ವಶಕ್ಕೆ ಪಡೆಯಲು ಡೊಮಿನಿಕಾಗೆ ತೆರಳಿದ್ದ ಭಾರತೀಯ ಅಧಿಕಾರಿಗಳ ತಂಡ ಬರಿಗೈಲಿ ವಾಪಾಸಾಗಿದೆ. ಚೋಕ್ಸಿ ವಿರುದ್ಧ ಡೊಮಿನಿಕಾದಲ್ಲಿ ಎರಡು ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದು, ಅದರ ವಿಚಾರಣೆ ಮುಗಿಯಲು ಕನಿಷ್ಠ ಒಂದು ತಿಂಗಳು ಬೇಕಾಗಬಹುದು. ಹೀಗಾಗಿ ಇಬ್ಬರು ಸಿಬಿಐ ಅಧಿಕಾರಿಗಳು ಸೇರಿದಂತೆ ಎಂಟು ಅಧಿಕಾರಿಗಳ ತಂಡ ಬರಿಗೈಲಿ ಭಾರತಕ್ಕೆ ವಾಪಾಸಾಗಿದೆ.

- Advertisement -

ಬಹುಕೋಟಿ ವಂಚನೆ ದಾಖಲಾಗುತ್ತಿದ್ದಂತೆ ಭಾರತದಿಂದ ಪರಾರಿಯಾಗಿದ್ದ ಚೋಕ್ಸಿ ಇತ್ತೀಚೆಗೆ ಡೊಮಿನಿಕಾದಲ್ಲಿ ಮಹಿಳೆಯೊಬ್ಬಳೊಂದಿಗೆ ಪತ್ತೆಯಾಗಿ ಬಂಧನಕೊಳಪಟ್ಟಿದ್ದ. ಹೀಗಾಗಿ ಆತನನ್ನು ಭಾರತಕ್ಕೆ ಗಡಿಪಾರು ಮಾಡಿಸಿಕೊಳ್ಳಲು ಅಧಿಕಾರಿಗಳ ತಂಡ ಡೊಮಿನಿಕಾಗೆ ತೆರಳಿತ್ತು.

ಆದರೆ, ಅಲ್ಲಿ ಚೋಕ್ಸಿ ವಿರುದ್ಧ ದಾಖಲಾಗಿರುವ ಪ್ರಕರಣಗಳ ವಿಚಾರಣೆ ಮುಗಿಯುವವರೆಗೆ ಆತನನ್ನು ಗಡಿಪಾರು ಮಾಡಲು ಸಾಧ್ಯವಿಲ್ಲ ಎನ್ನಲಾಗಿದೆ. ಸದ್ಯ ಚೋಕ್ಸಿ ಡೊಮಿನಿಕಾ-ಚೀನಾ ಫ್ರೆಂಡ್‌ ಶಿಪ್‌ ಹಾಸ್ಪಿಟಲ್‌ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Join Whatsapp