ಜಮ್ಮು-ಕಾಶ್ಮೀರದಲ್ಲಿ ಪರಿಚ್ಛೇದ 370 ಮರುಸ್ಥಾಪಿಸುವವರೆಗೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ : ಮೆಹಬೂಬಾ ಮುಫ್ತಿ

Prasthutha|

ನವದೆಹಲಿ : ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಪರಿಚ್ಛೇದ 370 ಅನ್ನು ಮರು ಜಾರಿಗೊಳಿಸುವ ವರೆಗೂ ತಾನು ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಪಿಡಿಪಿ ನಾಯಕಿ, ಮಾಜಿ ಸಿಎಂ ಮೆಹಬೂಬಾ ಮುಫ್ತಿ ಘೋಷಿಸಿದ್ದಾರೆ.

- Advertisement -

ವಿಧಾನಸಭಾ ಚುನಾವಣೆಯ ವಿಷಯ ಬಂದಾಗ, ಜಮ್ಮು-ಕಾಶ್ಮಿರದಲ್ಲಿ ಪರಿಚ್ಛೇದ 370 ಜಾರಿಯಾಗುವ ವರೆಗೂ ನಾನು ಯಾವುದೇ ಚುನಾವಣೆ ಸ್ಪರ್ಧಿಸುವುದಿಲ್ಲ ಎಂದು ಮೆಹಬೂಬಾ ಹೇಳಿದ್ದಾರೆ.

ಡಿಡಿಸಿ ಚುನಾವಣೆಯಲ್ಲಿ ಮೈತ್ರಿಕೂಟದ ಮೂಲಕ ಚುನಾವಣೆಗೆ ಸ್ಪರ್ಧಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, “ನಾವು ಪ್ರತಿರೋಧಿಗಳು ಹೌದು, ಆದರೆ ಜಮ್ಮು-ಕಾಶ್ಮಿರದ ಹಿತ ಕಾಯುವ ವಿಷಯದಲ್ಲಿ ನಾವು ಎಲ್ಲರೂ ಒಂದಾಗಬಹುದು. ಚುನಾವಣೆ ಬಗ್ಗೆ ಮಾತ್ರ ನಾವು ಮಾತನಾಡುತ್ತಿಲ್ಲ, ನಾವು ಕಳೆದುಕೊಂಡಿರುವುದನ್ನು ಮರಳಿ ಸ್ಥಾಪಿಸುವುದಕ್ಕೂ ನಾವು ಒಂದಾಗಬಲ್ಲೆವು ಎಂದು ಅವರು ಹೇಳಿದ್ದಾರೆ.

- Advertisement -

ವಿಧಾನಸಭಾ ಚುನಾವಣೆ ಹತ್ತಿರ ಬಂದಾಗ ನಾವು ಕುಳಿತು ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಚರ್ಚಿಸುತ್ತೇವೆ. ನಾನು ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿ ಅಲ್ಲ ಎಂದು ಮೆಹಬೂಬಾ ಸ್ಪಷ್ಟಪಡಿಸಿದ್ದಾರೆ.

Join Whatsapp