ಹೊಸದಿಲ್ಲಿ: ಈಶಾನ್ಯ ಭಾರತದ ನಾಗಾಲ್ಯಾಂಡ್ ಮತ್ತು ಮೇಘಾಲಯ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗೆ ಮತದಾನ ಆರಂಭವಾಗಿದೆ.
ಇದಕ್ಕಾಗಿ ಅಧಿಕಾರಿಗಳು ಸಕಲ ಸಿದ್ಧತೆ ನಡೆಸಿದ್ದರು. ಈ ಎರಡು ರಾಜ್ಯಗಳು ತಲಾ 60 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿವೆ.
ನಾಗಾಲ್ಯಾಂಡ್ನಲ್ಲಿ ಒಂದು ಕ್ಷೇತ್ರದ ಅಭ್ಯರ್ಥಿಗೆ ಅವಿರೋಧ(ಅಕುಲುಟೊ) ಹಾಗೂ ಮೇಘಾಲಯದಲ್ಲಿ ಯುಡಿಪಿ ಅಭ್ಯರ್ಥಿ ನಿಧನದ ಹಿನ್ನೆಲೆ ಒಂದು ಕ್ಷೇತ್ರಕ್ಕೆ (ಸೋಹಿಯಾಂಗ್) ಚುನಾವಣೆ ನಡೆಯುತ್ತಿಲ್ಲ.
ಇಂದು ಎರಡೂ ರಾಜ್ಯಗಳ 59 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.