ಬೆಳಗಾವಿಯಲ್ಲಿ ʼಅತೃಪ್ತʼ ನಾಯಕರ ಸಭೆ | ಕಡೆಗಣಿಸಿದರೆ ಬಿಜೆಪಿ ಇಬ್ಬಾಗ: ಈಶ್ವರಪ್ಪ ಭವಿಷ್ಯ

Prasthutha|

ಶಿವಮೊಗ್ಗ: ಬೆಳಗಾವಿಯಲ್ಲಿ ಬಿಜೆಪಿ ನಾಯಕರು ಸಭೆ ನಡೆಸಿದ್ದು, ಆಘಾತ ತಂದಿದೆ. ಅವರು ಪಕ್ಷದಲ್ಲಿ ಏನೇನು ಅನುಭವಿಸಿದ್ದಾರೆ ಎಂಬುದನ್ನು ಹೇಳಿಕೊಂಡಿಲ್ಲ. ಬದಲಾಗಿ ಪಾದಯಾತ್ರೆ ಮಾಡುವುದಾಗಿ ತಿಳಿಸಿದ್ದಾರೆ. ಒಂದು ವೇಳೆ ಇದು ನಡೆದಿದ್ದೆ ಆದಲ್ಲಿ ಬಿಜೆಪಿ ಗಲ್ಲಿ ಗಲ್ಲಿಗಳಲ್ಲಿ, ತಾಲೂಕು ಮಟ್ಟದಲ್ಲಿ ಇಬ್ಬಾಗವಾಗಲಿದೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.

- Advertisement -

ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ ಅವರು, ಸಭೆ ಸೇರಿದ ನಾಯಕರಲ್ಲಿ ಹಲವರು ಆರ್ ಎಸ್ ಎಸ್ ಸಂಘಟನೆಯಲ್ಲಿದ್ದವರು. ಬಿಜೆಪಿಯನ್ನು ಕಟ್ಟಿದವರು. ಪಕ್ಷದಲ್ಲಿ ತಮಗೆ ಆದ ನೋವಿನ ಬಗ್ಗೆ ಮಾತನಾಡಿಲ್ಲ. ಪಕ್ಷದ ಸಿದ್ಧಾಂತದ ಅಡಿ ಕೆಲಸ ಮಾಡಿದರೂ ಸಹಿತ ಅವರು ನೋವು ಉಂಡಿದ್ದಾರೆ. ಗಣೇಶ ಚತುರ್ಥಿ ಬಳಿಕ ಪಾದಯಾತ್ರೆ ಮಾಡುವುದಾಗಿ ಅವರು ಹೇಳಿಕೊಂಡಿದ್ದಾರೆ.

ಕೇಂದ್ರ ನಾಯಕರು ಈ ಸಭೆ ನಡೆಸಿದ ನಾಯಕರನ್ನು ಕಡೆಗಣಿಸಬಾರದು. 12 ಜನ ಮಾತ್ರ ಸಭೆ ನಡೆಸಿದ್ದಾರೆ ಎಂದು ಕೇಂದ್ರದ ನಾಯಕರು ತಾತ್ಸಾರ ಮಾಡಬಾರದು. ಬೆಂಗಳೂರಿನಲ್ಲಿ ಸಭೆ ನಡೆಸಲಾಗುವುದು ಎಂದು ಅಸಮಾಧಾನಿತ ನಾಯಕರು ತಿಳಿಸಿದ್ದಾರೆ. ಅವರು ಪಾದಯಾತ್ರೆ ನಡೆಸಿದ್ದೇ ಆದಲ್ಲಿ ಗಲ್ಲಿ ಗಲ್ಲಿಗಳಲ್ಲಿ ಪಕ್ಷ ಎರಡು ಹೋಳಾಗುತ್ತದೆ ಎಂದರು.
ಲೋಕಸಭೆ ಚುನಾವಣೆಯ ವೇಳೆಗೆ ಯಡಿಯೂರಪ್ಪ ಪುತ್ರನನ್ನು ಬಿವೈ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದು ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿತ್ತು. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕುಟುಂಬದ ಕೈಯಲ್ಲಿ ಅಧಿಕಾರ ನೀಡಿದ ಕಾರಣದಿಂದಲೇ ಲೋಕಸಭೆಯಲ್ಲಿ ಬಿಜೆಪಿ ಸ್ಥಾನ 25 ರಿಂದ 17ಕ್ಕೆ ಇಳಿದಿದೆ ಎಂದು ಈಶ್ವರಪ್ಪ ತಿಳಿಸಿದರು.



Join Whatsapp