ಸರ್ಕಾರದ ಮುಖ್ಯಸ್ಥರ ಭೇಟಿಯಾದ್ರೆ ‘ಡೀಲ್’ ಎಂದರ್ಥವಲ್ಲ: ಮೋದಿ ಭೇಟಿ ಬಗ್ಗೆ ಮೌನ ಮುರಿದ ಸಿಜೆಐ

Prasthutha|

ನವದೆಹಲಿ: ಹೈಕೋರ್ಟ್ ಗಳು ಮತ್ತು ಸುಪ್ರೀಂ ಕೋರ್ಟ್ ಗಳು ಮುಖ್ಯ ನ್ಯಾಯಮೂರ್ತಿಗಳು ರಾಜ್ಯ ಮತ್ತು ಕೇಂದ್ರದ ಸರ್ಕಾರಗಳ ಮುಖ್ಯಸ್ಥರನ್ನು ಭೇಟಿಯಾದರೆ ಏನೋ ಡೀಲ್ ನಡೆದಿದೆ ಎಂದರ್ಥವಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೇಳಿದ್ದಾರೆ.

- Advertisement -


ಈ ರೀತಿಯ ಭೇಟಿಗಳು ನ್ಯಾಯಾಂಗ ನಿರ್ಧಾರಗಳಿಗಿಂತ ಹೆಚ್ಚಾಗಿ ನ್ಯಾಯಾಂಗಕ್ಕೆ ಸಂಬಂಧಿಸಿದ ಮೂಲಸೌಕರ್ಯ ಸಮಸ್ಯೆಗಳ ಕುರಿತು ಕೇಂದ್ರೀಕರಿಸುತ್ತದೆ. ಈ ರೀತಿಯ ಚರ್ಚೆಗಳಿಂದ ನ್ಯಾಯಾಂಗ ವಿಷಯಗಳನ್ನು ಬದಿಗಿಡುವಷ್ಟು ಪ್ರಬುದ್ಧತೆ ನ್ಯಾಯಾಧೀಶರಲ್ಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.


ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಯಲ್ಲಿ ನಮ್ಮ ಕರ್ತವ್ಯಗಳ ಕುರಿತು ನಮಗೆ ಅರಿವಿದೆ ಹಾಗೂ ರಾಜಕೀಯ ಕಾರ್ಯಗಳಿಗೆ ಸಂಬಂಧಿಸಿದ ಕರ್ತವ್ಯಗಳ ಬಗ್ಗೆ ಅವರಿಗೆ ತಿಳಿದಿದೆ. ರಾಜ್ಯಗಳಲ್ಲಿ ಮುಖ್ಯ ನ್ಯಾಯಮೂರ್ತಿಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡುವುದು ವಾಡಿಕೆ. ಹಾಗೆಯೇ ಇದು ಕೂಡ. ರಾಜಕೀಯದಲ್ಲಿಯೂ ಕೂಡ ನ್ಯಾಯಾಂಗಕ್ಕೆ ಹೆಚ್ಚಿನ ಗೌರವವಿದೆ. ನ್ಯಾಯಾಂಗ ಮತ್ತು ಸರ್ಕಾರದ ನಡುವೆ ಸುಗಮವಾಗಿ ಕಾರ್ಯಗಳು ಸಾಗಲು ಸಭೆಗಳು ಅಗತ್ಯವಾಗಿವೆ ಎಂದರು.



Join Whatsapp