ಅಮ್ಮೆಂಬಳ ಕೇಂದ್ರ ಜುಮಾ ಮಸೀದಿಯಲ್ಲಿ ಮೀಲಾದುನ್ನೆಬಿ ಫೆಸ್ಟ್ 2021

Prasthutha|

ಮಂಗಳೂರು: ಮಂಗಳೂರು ತಾಲೂಕು ಬೋಳಿಯಾರ್ ಗ್ರಾಮದ ಅಮ್ಮೆಂಬಳ ಇತಿಹಾಸ ಪ್ರಸಿದ್ಧ ಕೇಂದ್ರ ಜುಮಾ ಮಸೀದಿ ಹಾಗೂ ನೂರುಲ್ ಹುದಾ ಮದ್ರಸಾ ಮಕ್ಕಳ ಮೀಲಾದುನ್ನೆಬಿ ಫೆಸ್ಟ್ 2021 ಕಾರ್ಯಕ್ರಮವು ಮಸೀದಿಯ ಅಧ್ಯಕ್ಷರಾದ ಉಬೈದ್ ಬಿ.ಹೆಚ್. ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

- Advertisement -

 ಕಾರ್ಯಕ್ರದ ಸ್ವಾಗತ ಭಾಷಣವನ್ನು ಜಲೀಲ್ ಮದನಿ ಮಾಡಿದರು. ಮಸೀದಿಯ ಉಸ್ತಾದರಾದ ಅಬೂಬಕ್ಕರ್ ಮದನಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮದ್ರಸಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಬುರ್ದಾ ಮಜ್ಲಿಸ್ ಜರಗಿತು. ಕಾರ್ಯಕ್ರಮದಲ್ಲಿ ಮಸೀದಿಯ ಉಪಾಧ್ಯಕ್ಷರಾದ ಕೇರೀಂ.ಜಿ, ಹನೀಫ್ ಬಿ.ಐ.ಟಿ, ಪ್ರಧಾನ ಕಾರ್ಯದರ್ಶಿ ಸಬೀರ್ ಕೋಟೆ, ಜೊತೆ ಕಾರ್ಯದರ್ಶಿ ಅಬ್ಬಾಸ್, ಕೋಶಾಧಿಕಾರಿ ಆಸೀಫ್, ಮಾಜಿ ಅಧ್ಯಕ್ಷರಾದ ಸಿದ್ದೀಕ್ ಜಿ, ಹನೀಫ್ ಎಸ್, ಮಾಜಿ ಉಪಾಧ್ಯಕ್ಷರಾದ ಇಕ್ಬಾಲ್ ಕೋಟೆ, ಮಾಜಿ ಕಾರ್ಯದರ್ಶಿ ಆರ್ ಕೆ ಮುಸ್ತಫ, ಕೇಂದ್ರ ಜುಮಾ ಮಸ್ಜಿದ್ ಕಾರ್ಯಕಾರಿ ಸಮಿತಿ ಸದಸ್ಯರಾದ ಅಬ್ಬಾಸ್ ಯು ಕೆ, ರಿಯಾಜ್ ಟಿ, ನಿಜಾಮ್, ಪರ್ವೀಝ್, ನಬೀಲ್, ರಫೀಕ್ ಹೆಚ್ ಉಪಸ್ಥಿತರಿದ್ದರು. ಜವಾದ್ ಧನ್ಯವಾದ ಅರ್ಪಿಸಿದರು.

- Advertisement -

ಕಾರ್ಯಕ್ರಮದ ಕೊನೆಯಲ್ಲಿ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಬಹುಮಾನ ವಿತರಣೆ ಜರಗಿತು.

ಮೂರು ಸ್ವಲಾತ್ ಹೇಳಿ ಕಾರ್ಯಕ್ರಮ ಕೊನೆಗೊಂಡಿತ್ತು.

Join Whatsapp