ಹಿರಿಯ ಕೈದಿಗಳ ಬಿಡುಗಡೆಗೆ ಅರ್ಜಿ ಸಲ್ಲಿಸಿದ ಮೇಧಾ ಪಾಟ್ಕರ್

Prasthutha|

ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್‌ ಅವರು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 70 ವರ್ಷ ವಯಸ್ಸಿನ ಕೈದಿಗಳನ್ನು ಬಿಡುಗಡೆ ಮಾಡಲು ಏಕರೂಪದ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಕೋರಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಪಾಟ್ಕರ್‌‌ ಪರವಾಗಿ ವಕೀಲ ಎಸ್‌.ಬಿ ತಾಲೇಕರ್ ಸಲ್ಲಿಸಿದ ಅರ್ಜಿಯಲ್ಲಿ, ಕೈದಿಗಳ ವರ್ಗೀಕರಣ ಮತ್ತು ಅವರ ಬಿಡುಗಡೆಯ ವಿಷಯ ಹೆಚ್ಚಾಗಿ ಸಾಮಾಜಿಕ ಪರಿಸ್ಥಿತಿಗಳು ಮತ್ತು ಆಡಳಿತಾತ್ಮಕ ಅನುಕೂಲತೆಯನ್ನು ಆಧರಿಸಿದೆ ಎಂದು ಪ್ರತಿಪಾದಿಸಲಾಗಿದೆ.

- Advertisement -

ಪಾಟ್ಕರ್ ತಮ್ಮ ಮನವಿಯಲ್ಲಿ ವೃದ್ಧಾಪ್ಯ ಮತ್ತು ವೈರಸ್‌ಗೆ ತುತ್ತಾಗುವ ಸಾಧ್ಯತೆ ಹೇಗೆ ಒಂದು ಪ್ರಮುಖ ಅಂಶವಾಗಿರಬೇಕು ಎಂದು ಉಲ್ಲೇಖಿಸಿದ್ದಾರೆ. ವಯಸ್ಸಾದ ಕೈದಿಗಳು ಹೆಚ್ಚು ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ ಎಂದು ಅವರು ಒತ್ತಿ ಹೇಳಿದ್ದಾರೆ. ವಿಶೇಷವಾಗಿ 70 ವರ್ಷ ಮೇಲ್ಪಟ್ಟವರಿಗೆ ಸೋಂಕು ತಗಲುವ ಸಾಧ್ಯತೆಗಳು ಹೆಚ್ಚಿವೆ ಎಂದು ಅರ್ಜಿಯಲ್ಲಿ ಹೇಳಿದ್ದಾರೆ.

ಅರ್ಜಿಯಲ್ಲಿ, ಮಹಾರಾಷ್ಟ್ರ, ಬಿಹಾರ, ಮಧ್ಯಪ್ರದೇಶದಂತಹ ರಾಜ್ಯಗಳ ಉದಾಹರಣೆಗಳನ್ನು ನೀಡಲಾಗಿದೆ. ಈ ರಾಜ್ಯಗಳು, ಮೇ 8ರಂದು ಸುಪ್ರೀಂಕೋರ್ಟ್‌ ನೀಡಿದ ಆದೇಶದ ಪ್ರಕಾರ ವೃದ್ಧಾಪ್ಯದಲ್ಲಿರುವ ಕೈದಿಗಳನ್ನು ಬಿಡುಗಡೆ ಮಾಡಲು ಕ್ರಮ ಕೈಗೊಂಡಿವೆ.

- Advertisement -

ಎಚ್‌ಪಿಸಿಯ (ಉನ್ನತಾಧಿಕಾರ ಸಮಿತಿಗಳು) ವಿಭಿನ್ನ ವಿಧಾನಗಳಿಂದ ವಿಭಿನ್ನ ರಾಜ್ಯಗಳಲ್ಲಿ ಏಕರೂಪತೆಯಿಲ್ಲ. ವೃದ್ಧರನ್ನು ಹೊಂದಿರುವ ಕಾರಾಗೃಹಗಳಲ್ಲಿ ದಟ್ಟಣೆಯನ್ನು ಕಡಿಮೆ ಮಾಡಲು ರಾಜ್ಯಗಳು ಯಾವುದೇ ಏಕರೂಪದ ಮಾನದಂಡಗಳನ್ನು ಹೊಂದಿಲ್ಲ” ಎಂದು ಪಾಟ್ಕರ್ ತಮ್ಮ ಅರ್ಜಿಯಲ್ಲಿ ವಿವರಿಸಿದ್ದಾರೆ.

Join Whatsapp