ಮಕ್ಕಾ: ಪವಿತ್ರ ಹಜ್ ಗೆ ಇಂದಿನಿಂದ ಚಾಲನೆ

Prasthutha|

ಮಕ್ಕಾ: ಕೋವಿಡ್-19 ಬಿಕ್ಕಟ್ಟಿನಿಂದಾಗಿ ಎರಡು ವರ್ಷಗಳ ನಂತರದ ಹಜ್, ಮಿನಾದಲ್ಲಿ ಯಾತ್ರಾರ್ಥಿಗಳು ರಾತ್ರಿ ತಂಗುವ ಮೂಲಕ ಇಂದಿನಿಂದ ಪ್ರಾರಂಭವಾಗಲಿದೆ.

- Advertisement -

ನಾಳೆ ಹಜ್ ನ ಅತ್ಯಂತ ಪ್ರಮುಖ ಘಟ್ಟವಾದ ಅರಫಾ ಸಂಗಮ ನಡೆಯಲಿದ್ದು, ಸೌದಿ ಅರೇಬಿಯಾದ ಹಜ್- ಉಮ್ರಾ ಸಚಿವಾಲಯವು ಈ ವರ್ಷ ಬಿಗಿ ಭದ್ರತೆಯಲ್ಲಿ ಹಜ್ ನಡೆಯಲಿದೆ ಎಂದು ತಿಳಿಸಿದೆ.

ಕಳೆದ ಎರಡು ವರ್ಷಗಳಿಂದ ಸೌದಿ ಅರೇಬಿಯಾದ ಒಳಗಿನ ಸೀಮಿತ ಸಂಖ್ಯೆಯ ಯಾತ್ರಾರ್ಥಿಗಳು ಮಾತ್ರ ಹಜ್ ನಡೆಸುತ್ತಿದ್ದರು. ಈ ಬಾರಿ ವಿದೇಶದಿಂದ ಬರುವ ಯಾತ್ರಾರ್ಥಿಗಳಿಗೆ ಹಜ್ ಗೆ ಅವಕಾಶ ನೀಡಲಾಗಿದೆ. ಕೋವಿಡ್ ವಿರುದ್ಧ ಲಸಿಕೆ ಪಡೆದ 65 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಅವಕಾಶ ನೀಡಲಾಗಿದೆ. ಭದ್ರತೆ ಮತ್ತು ಚಿಕಿತ್ಸೆ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಪೂರ್ಣಗೊಳಿಸಲಾಗಿದೆ. ಅನುಮತಿಯಿಲ್ಲದೆ ಮಕ್ಕಾ ಪ್ರವೇಶಿಸುವವರಿಗೆ 10,000 ರಿಯಾಲ್ ದಂಡ ವಿಧಿಸಲಾಗುವುದು ಎಂದು ಹಜ್ ಮತ್ತು ಉಮ್ರಾ ಸಚಿವಾಲಯ ತಿಳಿಸಿದೆ.

- Advertisement -

“ಎಲ್ಲರೂ ಆರೋಗ್ಯವಾಗಿದ್ದು, ಸುಗಮವಾಗಿ ಹಜ್ ನಡೆಸಲು ಸಿದ್ಧತೆಗಳು ಪೂರ್ಣಗೊಂಡಿವೆ. ಈ ವರ್ಷ ಭಾರತದಿಂದ ಒಟ್ಟು 79,237 ಯಾತ್ರಾರ್ಥಿಗಳು ಹಜ್ ಯಾತ್ರೆ ಕೈಗೊಳ್ಳಲಿದ್ದಾರೆ ಎಂದು ಭಾರತೀಯ ಹಜ್ ಮಿಷನ್ ನ ಮುಖ್ಯಸ್ಥ ಕಾನ್ಸುಲ್ ಜನರಲ್ ಮುಹಮ್ಮದ್ ಶಾಹಿದ್ ಆಲಂ ತಿಳಿಸಿದ್ದಾರೆ. 56,637 ಯಾತ್ರಾರ್ಥಿಗಳು ಅಧಿಕೃತ ಹಜ್ ಸಮಿತಿಯ ಮೂಲಕ ಮತ್ತು ಉಳಿದವರು ಖಾಸಗಿ ಗುಂಪಿನ ಮೂಲಕ ಆಗಮಿಸಿದರು. ಸೌದಿ ಅರೇಬಿಯಾದಲ್ಲಿ ಶನಿವಾರ ಮತ್ತು ಭಾರತದಲ್ಲಿ ಭಾನುವಾರ ಬಕ್ರೀದ್ ಆಚರಿಸಲು ನಿರ್ಧರಿಸಲಾಗಿದೆ.



Join Whatsapp