ನವರಾತ್ರಿ ಆಚರಣೆಯಲ್ಲಿ ಮಾಂಸದ ಮಳಿಗೆ ತೆರೆಯಲು ಅನುಮತಿಯಿಲ್ಲ: ದೆಹಲಿ ಪಾಲಿಕೆ ಮೇಯರ್

Prasthutha|

ನವದೆಹಲಿ: ನವರಾತ್ರಿ ಆಚರಣೆಯ ಪ್ರಯುಕ್ತ ಮಾಂಸದ ಮಳಿಗೆಗಳನ್ನು ತೆರೆಯಲು ಅನುಮತಿ ನೀಡುವುದಿಲ್ಲ ಎಂದು ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ (SMDC) ಮೇಯರ್ ಮುಖೇಶ್ ಸೂರ್ಯನ್ ತಿಳಿಸಿದ್ದಾರೆ ಮತ್ತು ಈ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಿದ್ದಾರೆ.

- Advertisement -

ಏಪ್ರಿಲ್ 2 – 11 ರಿಂದ ಆಚರಿಸಲಾಗುವ ನವರಾತ್ರಿ ಸಂದರ್ಭದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿರುವ ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಸ್ಥಳೀಯಾಡಳಿತ ಇದೇ ಮೊದಲು ಆದೇಶ ನೀಡಿದೆ.

ಇದಕ್ಕೆ ಸಂಬಂಧಿಸಿದ ಅಧಿಕೃತ ಆದೇಶ ಇನ್ನಷ್ಟೇ ಹೊರಬೀಳಲಿದೆ ಎಂದು ಅಂದಾಜಿಸಲಾಗಿದೆ.

- Advertisement -

ನವರಾತ್ರಿಯಲ್ಲಿ ದುರ್ಗಾದೇವಿಗೆ ದೈನಂದಿನ ಪ್ರಾರ್ಥನೆ ಸಲ್ಲಿಸುವಾಗ ಮಾಂಸದ ಅಂಗಡಿಗಳಿಂದ ಮಾಂಸದ ದುರ್ವಾಸನೆ ಅನುಭವಿಸಿದಾಗ ‘ಧಾರ್ಮಿಕ ನಂಬಿಕೆ ಮತ್ತು ಭಕ್ತರ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ದೆಹಲಿ ಪಾಲಿಕೆ ಆಯುಕ್ತ ಜ್ಞಾನೇಶ್ ಭಾರ್ತಿ ಅವರಿಗೆ ಪತ್ರದಲ್ಲಿ ಮೇಯರ್ ಸೂರ್ಯನ್ ಉಲ್ಲೇಖಿಸಿದ್ದಾರೆ.

ನವರಾತ್ರಿ ಸಂದರ್ಭದಲ್ಲಿ ದುರ್ಗಾದೇವಿಯ ಭಕ್ತರು ಕಡ್ಡಾಯವಾಗಿ ಸಸ್ಯಾಹಾರಿ ಆಹಾರದೊಂದಿಗೆ ಒಂಬತ್ತು ದಿನಗಳ ಕಾಲ ಉಪವಾಸವನ್ನು ಆಚರಿಸುತ್ತಾರೆ ಮತ್ತು ಮಾಂಸಹಾರಿ ಆಹಾರ, ಮದ್ಯ ಮತ್ತು ಕೆಲವು ಮಸಾಲೆಗಳ ಬಳಕೆಯನ್ನು ತ್ಯಜಿಸುತ್ತಾರೆ ಎಂದು ಅವರು ತಿಳಿಸಿದ್ದಾರೆ.

SDMC ಯ ವ್ಯಾಪ್ತಿಯಲ್ಲಿ ಸುಮಾರು 1,500 ನೋಂದಾಯಿತ ಮಾಂಸದ ಅಂಗಡಿಗಳಿವೆ.



Join Whatsapp