ಬೆಂಗಳೂರು: ಶ್ರೀರಾಮ ನವಮಿಯ ಪ್ರಯುಕ್ತ ಏಪ್ರಿಲ್ 10 ರಂದು ನಗರದಲ್ಲಿ ಪ್ರಾಣಿ ಹತ್ಯೆ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಆದೇಶ ಹೊರಡಿಸಿದೆ.
ಮಾಂಸ ಮಾರಾಟ ನಿಷೇಧ ಮಾಡಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆದೇಶ ಹೊರಡಿಸಿದ್ದು, ಏಪ್ರಿಲ್ 10ರಂದು ಹಿಂದೂ ಧಾರ್ಮಿಕ ಹಬ್ಬ ರಾಮನವಮಿ ನಡೆಯಲಿದೆ. ಭಾನುವಾರ ರಾಮನವಮಿ ಹಬ್ಬದ ಆಚರಣೆ ಹಿನ್ನೆಲೆ ಈ ಆದೇಶ ಜಾರಿಗೊಳಿಸಲಾಗಿದೆ.
ಶ್ರೀರಾಮ ನವಮಿಯಂದು ಕಸಾಯಿಖಾನೆ, ಪ್ರಾಣಿ ವಧೆ, ಮಾಂಸ ಮಾರಾಟದ ಮೇಲೆ ಸಂಪೂರ್ಣ ನಿಷೇಧ ಹೇರಲಾಗುವುದು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರ ಸುತ್ತೋಲೆ ಆಧರಿಸಿ ಬಿಬಿಎಂಪಿ ಪಶುಸಂಗೋಪನಾ ಇಲಾಖೆಯ ಜಂಟಿ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.