ಚುನಾವಣೆ ಬಳಿಕ ಬೊಮ್ಮಾಯಿಗೂ ಶೆಟ್ಟರ್, ಸವದಿ ಪರಿಸ್ಥಿತಿ ಬರಲಿದೆ: ಎಂ.ಬಿ.ಪಾಟೀಲ್ ಭವಿಷ್ಯ

Prasthutha|

ವಿಜಯಪುರ: ಚುನಾವಣೆ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಶೆಟ್ಟರ್ ಹಾಗೂ ಸವದಿ ಅವರಿಗೆ ಆದಂತಹ ರಾಜಕೀಯ ಪರಿಸ್ಥಿತಿ ಎದುರಿಸಲಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಭವಿಷ್ಯ ನುಡಿದಿದ್ದಾರೆ.

- Advertisement -

ಸೋಮವಾರ ತಮ್ಮ ತವರು ಕ್ಷೇತ್ರ ಬಬಲೇಶ್ವರದಲ್ಲಿ ನಾಮಪತ್ರ ಸಲ್ಲಿಸಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಚುನಾವಣೆ ಬಳಿಕ ಬೊಮ್ಮಾಯಿ ಅವರು ಮಾತ್ರವಲ್ಲ ಬಿಜೆಪಿ ಇತರೆ ನಾಯಕರ ಪರಿಸ್ಥಿತಿ ಎನಾಗಲಿದೆ ಅಂತಾ ನಿಮಗೂ ಗೊತ್ತಾಗಲಿದೆ ಎಂದು ಹೇಳಿದರು.

ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್ ಅವರಿಗಾದ ಪರಿಸ್ಥಿತಿ ಬೊಮ್ಮಾಯಿಗೆ ಆಗುತ್ತದೆ.ಬೇಕಾದರೆ ಬರೆದಿಟ್ಟುಕೊಳ್ಳಿ,. ಚುನಾವಣೆ ಬಳಿಕ ಎಲ್ಲರಿಗೂ ಗೊತ್ತಾಗುತ್ತದೆ ಎಂದರು.

- Advertisement -

ಬಿಜೆಪಿಯಲ್ಲಿ ಲಿಂಗಾಯತ ನಾಯಕರನ್ನು ಮೂಲೆಗುಂಪು ಮಾಡಲಾಗುತ್ತಿದೆ. ಮೊದಲು ಯಡಿಯೂರಪ್ಪ ಅವರಿಂದ ಅಧಿಕಾರ ಕಸಿದುಕೊಂಡ ಬಿಜೆಪಿ ಬಳಿಕ ಲಕ್ಷ್ಮಣ್ ಸವದಿ, ಜಗದೀಶ್ ಶೆಟ್ಟರ್ ಅವರನ್ನು ಮೂಲೆಗುಂಪು ಮಾಡಿದ್ದಾರೆ. ಮುಂದಿನ ಸರದಿ ಬೊಮ್ಮಾಯಿ ಅವರದ್ದು. ಚುನಾವಣೆ ಬಳಿಕ ಅವರಿಗೂ ಇದೇ ಪರಿಸ್ಥಿತಿ ಬರುವುದು ಖಚಿತ ಎಂದರು.



Join Whatsapp