ಕೇರಳದಲ್ಲಿ ಶಾಸಕನನ್ನು ಮದುವೆಯಾಗಲಿದ್ದಾರೆ ದೇಶದಲ್ಲೇ ಅತಿ ಕಿರಿಯ ಮೇಯರ್!

Prasthutha|

- Advertisement -

ತಿರುವನಂತಪುರಂ: ಕೇರಳ ರಾಜಧಾನಿ ತಿರುವನಂತಪುರಂ ಮೇಯರ್ ಆರ್ಯ ರಾಜೇಂದ್ರನ್ ಅವರನ್ನು ಬಹು ಕಾಲದ ಗೆಳೆಯ ಬಾಲುಶ್ಶೇರಿ ಶಾಸಕ ಸಚಿನ್ ದೇವ್ ವರಿಸಲಿದ್ದಾರೆ.

ಒಂದು ತಿಂಗಳಲ್ಲೇ ಮದುವೆ ನಡೆಯಲಿದ್ದು, ಮದುವೆಯ ದಿನಾಂಕವನ್ನು ನಿಗದಿಪಡಿಸಲಿಲ್ಲ ಎಂದು ಸಚಿನ್ ತಂದೆ ತಿಳಿಸಿದ್ದಾರೆ. ವಿದ್ಯಾರ್ಥಿಯಾಗಿರುವಾಗಲೇ ಗೆಳೆಯರಾಗಿದ್ದ ಇವರಿಬ್ಬರು SFIಯಲ್ಲಿ ಜೊತೆಯಾಗಿ ಕಾರ್ಯ ನಿರ್ವಹಿಸಿದ್ದರು.

- Advertisement -

ಕಲ್ಲಿಕೋಟೆಯ ನೆಲ್ಲಿಕೋಡ್ ಮೂಲದವರಾದ ಸಚಿನ್ ದೇವ್. ಕಲ್ಲಿಕೋಟೆ ಸರ್ಕಾರಿ ಆರ್ಟ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದಿದ್ದಾರೆ. ಅವರು ಕಲ್ಲಿಕೋಟೆ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿಯನ್ನೂ ಪಡೆದಿದ್ದಾರೆ.

ಆರ್ಯ ರಾಜೇಂದ್ರನ್ ತಿರುವನಂತಪುರಂನ ಆಲ್ ಸೇಂಟ್ಸ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗಲೇ ದೇಶದ ಅತ್ಯಂತ ಕಿರಿಯ ಮೇಯರ್ ಆಗಿ ಅಧಿಕಾರವನ್ನು ವಹಿಸಿಕೊಂಡಿದ್ದರು.

Join Whatsapp