ಯೋಗಿ ಸರಕಾರ ಮುಸ್ಲಿಮರನ್ನು ಗುರಿಪಡಿಸಿ ನಡೆಸುತ್ತಿರುವ ಬುಲ್ಡೋಜರ್ ಧ್ವಂಸವನ್ನು ಶಕ್ತವಾಗಿ ಖಂಡಿಸಿದ ಮಾಯಾವತಿ

Prasthutha|

ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರಕಾರ ಮುಸ್ಲಿಮರನ್ನು ಗುರಿಪಡಿಸಿಕೊಂಡು ಅವರ ನಿವಾಸಗಳನ್ನು ಬುಲ್ಡೋಝರ್ ಮೂಲಕ ಧ್ವಂಸಗೊಳಿಸುತ್ತಿರುವುದು ಖಂಡನಾರ್ಹ ಎಂದು ಬಿ ಎಸ್ ಪಿ ನಾಯಕಿ ಮಾಯಾವತಿ ಯೋಗಿ ಹಿಂಸೆಯ ವಿರುದ್ಧ ಕಿಡಿಕಾರಿದ್ದಾರೆ.

- Advertisement -

ಇಂತಹ ದುಷ್ಕೃತ್ಯಗಳನ್ನು ಮಾಡುವ ಮೂಲಕ ಅಲ್ಪಸಂಖ್ಯಾತ ಮುಸ್ಲಿಮರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಅನ್ಯಾಯದ ವಿರುದ್ಧ ಎತ್ತುತ್ತಿರುವ ಧ್ವನಿಗಳನ್ನು ಮೊಟಕುಗೊಳಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.



Join Whatsapp