ಶಿವಮೊಗ್ಗ: ನಮ್ಮ ಇತಿಹಾಸದ ಸಾಂಸ್ಕೃತಿಕ ನಾಯಕರ ಆದರ್ಶಗಳು ನಮಗೆ ಸ್ಫೂರ್ತಿಯಾಗಬೇಕು. ಇತಿಹಾಸಕಾರರ ಬಗ್ಗೆ ಯುವಕರು ತಿಳಿಯುವಂತಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಅಭಿಪ್ರಾಯಪಟ್ಟರು.
ಭಾನುವಾರ ನಡೆದ ಕಿತ್ತೂರು ರಾಣಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಿತ್ತೂರು ರಾಣಿ ಚೆನ್ನಮ್ಮ ಯಾಕೆ ವೀರ ಮಾತೆಯಾದರು ಎಂದು ಯುವ ಜನತೆ ತಿಳಿಯುವಂತಾಗಬೇಕು. ರಾಣಿ ಚೆನ್ನಮ್ಮ ತನ್ನ ಜೀವನದಲ್ಲಿ ಎದುರಿಸಿದ ಸಮಸ್ಯೆಗಳು ಮತ್ತು ತೆಗೆದುಕೊಂಡ ನಿರ್ಧಾರಗಳು ಯುವಕರಿಗೆ ಸ್ಫೂರ್ತಿಯಾಗಬೇಕಿದೆ.ಈ ಬಗ್ಗೆ ಯುವಕರು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಬೇಕು. ಇದಕ್ಕಾಗಿ ಶಿಕ್ಷಣ ಪದ್ಧತಿಗೆ ಬದಲಾವಣೆ ತರಲಾಗಿದ್ದು, ಈ ಬದಲಾವಣೆ ನಮ್ಮ ಯುವಕರನ್ನು ಹೆಚ್ಚು ಪರಿಪೂರ್ಣರನ್ನಾಗಿಸಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ. ಮಿಥುನ್ ಕುಮಾರ್, ರಾಜ್ಯ ಪಂಚಮಸಾಲಿ ಲಿಂಗಾಯಿತರ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಬೇಗೂರು ಸಿದ್ದೇಶ್, ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಪ್ಪ ಮೇಡ್ಲೇರಿ ಭಾಗವಹಿಸಿದ್ದರು.