ಈದುಲ್ ಫಿತ್ರ್ ಹಬ್ಬವು ಸಮಾಜದ ಸೌಹಾರ್ದತೆ, ಒಗ್ಗಟ್ಟಿನ ಕೊಂಡಿಯಾಗಲಿ: ರಿಯಾಝ್ ಫರಂಗಿಪೇಟೆಯವರಿಂದ ಈದ್ ಸಂದೇಶ

Prasthutha|

ಮಂಗಳೂರು: ನಾವು ಆಚರಿಸುವ ಹಬ್ಬಗಳು ಸಮಾಜದಲ್ಲಿ ಎಂದಿಗೂ ಒಡಕು ಮೂಡಿಸುವುದಿಲ್ಲ, ಬದಲಾಗಿ ಸಮಾಜವನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಶಾಂತಿ,ಸಮಾಧಾನ, ಸಹೋದರತೆ ಸಹಬಾಳ್ವೆಯು ಈದುಲ್ ಫಿತರ್ ಹಬ್ಬದ ಪ್ರಮುಖ ಸಂದೇಶವಾಗಿದೆ ಎಂದು ಉಳ್ಳಾಲ ವಿಧಾನಸಭಾ ಕ್ಷೇತ್ರದ ಎಸ್’ಡಿಪಿಐ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ಅವರು ಈದ್ ಸಂದೇಶ ನೀಡಿದ್ದಾರೆ.

- Advertisement -

ಸಮಾಜದಲ್ಲಿ ಶ್ರೀಮಂತರು, ಬಡವರು ಎಂಬ ಭೇದಭಾವವನ್ನು ಹೋಗಲಾಡಿಸಿ ಸ್ವಾಭಿಮಾನದಿಂದ ಕೂಡಿದ ಬದುಕು ಕಟ್ಟಲು ಪ್ರೇರಣೆಯಾಗಿದೆ. ಈ ಪ್ರೇರಣೆಯೆ ಒಂದು ಸೌಹಾರ್ದ ಸಮಾಜದ ಬುನಾದಿಯಾಗಿದೆ. ನಮ್ಮಲ್ಲಿರುವ ಒಡಕುಗಳು ಈದ್ ಹಬ್ಬಕ್ಕೆ ತೊಡಕಾಗದಿರಲಿ. ಈ ಹಬ್ಬವು ಸಮಾಜದಲ್ಲಿ ನೆಲೆ ನಿಂತಿರುವ ದ್ವೇಷಗಳನ್ನು ಕೊನೆಗಾಣಿಸಲಿ. ಉತ್ತಮ ಭಾಂದವ್ಯ ತುಂಬಿದ ದೇಶ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಲಿ. ನಾಡಿನ ಸಮಸ್ತ ಜನತೆಗೆ ಈ ಮೂಲಕ ಈದುಲ್ ಫಿತರ್ ಹಬ್ಬದ ಶುಭಾಶಯಗಳು ಎಂದು ಅವರು ಈದ್ ಸಂದೇಶದಲ್ಲಿ ತಿಳಿಸಿದ್ದಾರೆ.



Join Whatsapp