ಕನ್ನಡ ಪಠ್ಯ ಪುಸ್ತಕದಲ್ಲಿ ಗಣಿತ ಪಾಠ: ಸರ್ಕಾರದ ಎಡವಟ್ಟಿಗೆ ವಿದ್ಯಾರ್ಥಿಗಳು ಹೈರಾಣ

Prasthutha|

ಬೆಂಗಳೂರು : ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿದ ಎಂಟನೇ ತರಗತಿಯ ತಿಳಿ ಕನ್ನಡ ಪಠ್ಯ ಪುಸ್ತಕದಲ್ಲಿ ಗಣಿತ ಪಾಠವೂ ಒಳಹೊಕ್ಕಿದ್ದು, ಪಠ್ಯ ಪುಸ್ತಕ ಸಮಿತಿ ಮಾಡಿದ ಎಡವಟ್ಟಿನಿಂದ ವಿದ್ಯಾರ್ಥಿಗಳು ಗಲಿಬಿಲಿಗೊಂಡಿದ್ದಾರೆ.

- Advertisement -

ಕನ್ನಡ ಪಠ್ಯ ಪುಸ್ತಕದ ಮೊದಲ ಭಾಗದಲ್ಲೇ ಈ ಎಡವಟ್ಟು ಕಂಡು ಬಂದಿದ್ದು, ಮೊದಲ ಪಾಠದ ಮಧ್ಯದಲ್ಲೇ ರೇಖಾ  ಚಿತ್ರ ,ಬೀಜ ಗಣಿತ ಮುಂತಾದ ಗಣಿತ ಪಾಠಗಳು ಮುದ್ರಿತಗೊಂಡಿವೆ. ಇದರಿಂದಾಗಿ ವಿದ್ಯಾರ್ಥಿಗಳು ಮಾತ್ರವಲ್ಲದೆ ಶಿಕ್ಷಕರಿಗೂ ತಲೆಬಿಸಿ ಆಗಿದೆ.

ಇಂತಹದೇ ಲೋಪಗಳು ಹಲವೆಡೆ ಕಂಡುಬಂದಿದ್ದು, ಕನ್ನಡ ಪಠ್ಯ ಮುದ್ರಿಸಿದ ನಂತರ ಪಠ್ಯ ಪುಸ್ತಕ ಸಮಿತಿ ಈ ಬಗ್ಗೆ ಪೂರ್ವ ಪರಿಶೀಲನೆ ನಡೆಸೋಲ್ವಾ ಎಂದು ಪೋಷಕರು ಪ್ರಶ್ನಿಸಿದ್ದಾರೆ.



Join Whatsapp