ಮಲ್ಪೆ ಬಂದರಿನಲ್ಲಿ ಬೃಹದಾಕಾರದ ಗರಗಸ ಮೀನು ಪತ್ತೆ; ನೋಡಲು ಮುಗಿಬಿದ್ದಜನ

Prasthutha|

ಉಡುಪಿ: ಮಲ್ಪೆ ಬಂದರಿನಲ್ಲಿ ಬರೋಬ್ಬರಿ 250 ಕೆ.ಜಿ ತೂಕದ ಅಪರೂಪದ ಮೀನೊಂದು ಪತ್ತೆಯಾಗಿದೆ. ನೋಡಲು ಭಯಾನಕವಾಗಿರುವ ಬೃಹದಾಕಾರದ ಈ ಮೀನು ಬಂದರಿನಲ್ಲಿ ನೆರೆದಿದ್ದ ಮೀನುಗಾರರ ಅಚ್ಚರಿಗೆ ಕಾರಣವಾಗಿದೆ.  

- Advertisement -

ಸೀ ಕ್ಯಾಪ್ಟನ್ ಎಂಬ ಲೈಲ್ಯಾಂಡ್ ಬೋಟಿನವರು ಬೀಸಿದ ಬಲೆಗೆ ಸಿಲುಕಿರುವ ಭಾರೀ ಗಾತ್ರದ ಈ ಮೀನು ಮಲ್ಪೆ ಬಂದರಿಗೆ ಬಂದು ಬೋಟಿನ ಮೀನುಗಳನ್ನು ಇಳಿಸುವ ವೇಳೆ ಬಲೆಯೊಳಗೆ ಪತ್ತೆಯಾಗಿದೆ.

ಗರಗಸ ಶಾರ್ಕ್ ಎಂಬ ಈ ಮೀನನ್ನು ಸ್ಥಳೀಯ ಭಾಷೆಯಲ್ಲಿ ಗರಗಸ ಮೀನು ಎಂದು ಕಹೇಳುತ್ತಾರೆ. ಬಾಯಿಂದ ಗರಗಸ ಮಾದರಿಯ ಮೊನಚಾದ ಹಲ್ಲುಗಳು ಹೊರ ಬಂದಿರುವ ಹತ್ತು ಅಡಿಗೂ ಅಧಿಕ ಉದ್ದದ ಈ ಮೀನನ್ನುಕ್ರೇನ್ ಮೂಲಕ ಎತ್ತಿ ವಿಲೇವಾರಿ ಮಾಡಲಾಗಿದೆ. ಅಪಾಯಕಾರಿಯಾದ ಈ ಮೀನನ್ನು, ವನ್ಯಜೀವಿ ಸಂರಕ್ಷಣಾ ಕಾಯ್ದೆ ನಿಯಮಗಳ ಅನುಸಾರ ಅನುಬಂಧ 1ರಲ್ಲಿ ಗುರುತಿಸಲಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

Join Whatsapp