ಹಿಜಾಬ್ ಅವಕಾಶ ನಿರಾಕರಣೆ ಖಂಡಿಸಿ ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ

Prasthutha|

ಕಲಬುರಗಿ: ಮುಸ್ಲಿಮ್ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ದುರುದ್ದೇಶದಿಂದ ಹಿಜಾಬ್ ವಿವಾದ ಸೃಷ್ಟಿಸಲಾಗಿದೆ ಎಂದು ಆರೋಪಿಸಿ ಕಲಬುರಗಿಯಲ್ಲಿ ಇಂದು ಮುಸ್ಲಿಮರು ಬೃಹತ್ ಪ್ರತಿಭಟನೆ ನಡೆಸಿದರು.

- Advertisement -

ವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು, ರಾಜಕೀಯ ಮುಖಂಡರು ಪ್ರತಿಭಟನೆಯನ್ನು ಪಾಲ್ಗೊಂಡಿದ್ದರು.

ಶಾಸಕಿ ಕನೀಝ್ ಫಾತಿಮಾ ನೇತೃತ್ವದಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಕಲಬುರಗಿ ನಗರದ ನ್ಯಾಶನಲ್ ಕಾಲೇಜ್, ಅಲ್ ಬದ್ರ್ ಕಾಲೇಜು ಸೇರಿದಂತೆ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಭಾಗವಹಿಸಿದ್ದರು. ‘ಹಿಜಾಬ್ ನಮ್ಮ ಹಕ್ಕು. ಇದನ್ನು ಧರಿಸುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’. ‘ನಮಗೆ ನ್ಯಾಯ ಕೊಡಿ’ ಎಂದು ವಿದ್ಯಾರ್ಥಿನಿಯರು ಘೋಷಣೆಗಳನ್ನು ಕೂಗಿದರು.

- Advertisement -

ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ಕನೀಝ್ ಫಾತಿಮಾ, ನಾನು ಹಿಜಾಬ್ ಧರಿಸಿಯೇ ವಿಧಾನ ಸಭೆ ಪ್ರವೇಶಿಸುತ್ತೇನೆ. ಯಾರಿಗಾದರೂ ತಾಕತ್ತಿದ್ದರೆ ತಡೆಯಲಿ, ಹಿಜಾಬ್, ಬುರ್ಖಾ ಧರಿಸುವುದು ನಮ್ಮ ಹಕ್ಕು. ಇದರಿಂದ ನಮ್ಮನ್ನು ತಡೆಯಲಾಗದು. ಸಾಂವಿಧಾನಿಕವಾಗಿಯೂ ಇದಕ್ಕೆ ಅವಕಾಶ ಇದೆ ಎಂದರು.

Join Whatsapp