October 10, 2021

ಕತಾರ್ ಇಂಡಿಯನ್ ಸೋಷಿಯಲ್ ಫೋರಂ ನಿಂದ ಬೃಹತ್ ಆರೋಗ್ಯ ತಪಾಸಣಾ ಶಿಬಿರ

ದೋಹ:  ಕತಾರ್ ಇಂಡಿಯನ್ ಸೋಷಿಯಲ್ ಫೋರಂ ವತಿಯಿಂದ, C-Ring ರಸ್ತೆಯಲ್ಲಿರುವ ನಸೀಮ್ ಮೆಡಿಕಲ್ ಸೆಂಟರ್ ನ ಸಹಯೋಗದೊಂದಿಗೆ, ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.

ಆಝಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ, ಮುಖ್ಯವಾಗಿ ವಾಹನ ಚಾಲಕರು ಹಾಗೂ ಕಡಿಮೆ ವೇತನ ಪಡೆಯುವ ಕಾರ್ಮಿಕರಿಗಾಗಿ ಆಯೋಜಿಸಿದ್ದ ಈ ಉಚಿತ ಶಿಬಿರದಲ್ಲಿ, 850 ಮಂದಿ ಉಪಯೋಗ ಪಡೆದರು.

 ಬ್ಲಡ್ ಪ್ರೆಷರ್, ಬಿ ಎಂ ಐ, ಬ್ಲಡ್ ಶುಗರ್, ಟೋಟಲ್ ಕ್ಲೋರೋಸ್ಟೆರಾಲ್ ಇನ್ನಿತರ  ಟೆಸ್ಟ್ ಗಳ ನಂತರ, ನುರಿತ ವೈದ್ಯರನ್ನು ಸಂಪರ್ಕಿಸಿ, ಅವರ ಸಲಹೆಯನ್ನು ಪಡೆಯುವ ಅವಕಾಶವನ್ನು ಪ್ರತಿಯೊಬ್ಬರಿಗೂ ಕಲ್ಪಿಸಲಾಗಿತ್ತು. ಇದರೊಂದಿಗೆ, ನೇತ್ರವೈದ್ಯರು ಮತ್ತು ದಂತ ವೈದ್ಯರಿಂದ ಕಣ್ಣಿನ ಮತ್ತು ದಂತ ಪರೀಕ್ಷೆಯನ್ನು ಮಾಡಿ, ಅಗತ್ಯವಿದ್ದವರಿಗೆ ಉಚಿತ ಔಷಧಿಗಳನ್ನು ವಿತರಿಸಲಾಯಿತು.

ಈ ಶಿಬಿರದ ಅಧ್ಯಕ್ಷತೆಯನ್ನು ಕತಾರ್ ಇಂಡಿಯನ್ ಸೋಷಿಯಲ್  ಫೋರಂ ನ ಅಧ್ಯಕ್ಷರಾದ ಸಯೀದ್ ಕೊಮಾಚಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ, ಭಾರತೀಯ ದೂತವಾಸದ, ದ್ವಿತೀಯ ಕಾರ್ಯದರ್ಶಿ (ಮಾಹಿತಿ, ಶಿಕ್ಷಣ ಮತ್ತು ಸಂಸ್ಕೃತಿ) ಕುಲ್ಜಿತ್ ಸಿಂಗ್ ಅರೋರ ಶಿಬಿರದ ಉದ್ಘಾಟಿಸಿ, ಕತಾರ್ ಇಂಡಿಯನ್ ಸೋಷಿಯಲ್ ಫೋರಂ ನ ಸಮಾಜ ಸೇವೆಯ ಕಾರ್ಯಗಳನ್ನು ಶ್ಲಾಘಿಸಿ, ಭಾರತೀಯ ದೂತವಾಸದಿಂದ, ಅನಿವಾಸಿ ಭಾರತೀಯರಿಗೆ ದೊರೆಯುವ ಸೇವೆಗಳ ಬಗ್ಗೆ ವಿವರಿಸಿ, ಅದರ ಪ್ರಯೋಜನಗಳನ್ನು ಪಡೆದುಕೊಳ್ಳಬೇಕೆಂದು ಹೇಳಿದರು.

ಇತರ ಅತಿಥಿಗಳಾಗಿ ಆಗಮಿಸಿದ್ದ ICC ಅಧ್ಯಕ್ಷ ಕೆ.ಎನ್. ಬಾಬುರಾಜನ್, ICBF ಅಧ್ಯಕ್ಷ ಜಿ಼ಯಾದ್ ಉಸ್ಮಾನ್, ನಸೀಮ್ ಮೆಡಿಕಲ್ ಸೆಂಟರ್ ನ Dr. ಮುನೀರ್ ಅಲಿ ಇಬ್ರಾಹಿಮ್ ( General Manager, Staragic Development),   ಬಾಬು ಶಾನವಾಜ಼್ (General Manager, Operations),  ರಿಷಾದ್ (Senior Manager, Operations) ಮತ್ತು Dr. ಮುಹಮ್ಮದ್ ಶಮೀಮ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Dr. ಮುಹಮ್ಮದ್ ಶಮೀಮ್, ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು.

ಕತಾರ್ ಇಂಡಿಯನ್ ಸೋಷಿಯಲ್ ಫೋರಂ, ಕೇರಳ  ರಾಜ್ಯಾಧ್ಯಕ್ಷ ಮುಹಮ್ಮದ್ ಅಲಿ, ಕಾರ್ಯದರ್ಶಿಗಳಾದ ಅಹಮದ್ ಕಡಮೆರಿ ಕ್ರಮವಾಗಿ ಪ್ರಾಸ್ತಾವಿಕ ಭಾಷಣ ಮತ್ತು ಸ್ವಾಗತ ಭಾಷಣ ಮಾಡಿದರು. ಉಸ್ಮಾನ್ ಕಾರ್ಯಕ್ರಮ ನಿರೂಪಿಸುವುದರೊಂದಿಗೆ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!