ಮಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಗುರುಪುರ ಬ್ಲಾಕ್ ಸಮಿತಿ ಹಾಗೂ ದೇರಳಕಟ್ಟೆ ಯೆನಪೋಯ ಆಸ್ಪತ್ರೆಯ ಸಹಭಾಗಿತ್ವದಲ್ಲಿ ರಕ್ತ ಕೊಟ್ಟು ಬಾಂಧವ್ಯ ಕಟ್ಟು ರಕ್ತದಾನ ಮಾಸಾಚರಣೆ ಪ್ರಯುಕ್ತ ಮರ್ಹೂಂ ನೌಶಾದ್ ಹಾಜಿ ಸುರಲ್ಪಾಡಿ ಹಾಗೂ ಮರ್ಹೂಂ ಅಯ್ಯೂಬ್ ಗುರುಪುರ ಇವರ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ ಮಾರ್ಚ್ 19ರಂದು ನಡೆಯಿತು.
ಆದಿತ್ಯವಾರ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆ ತನಕ ಗುರುಪುರ ಗ್ರಾಮ ಪಂಚಾಯತ್ ಬಳಿಯ ಮೈದಾನದಲ್ಲಿ ಎಸ್’ಡಿಪಿಐ ಗುರುಪುರ ಬ್ಲಾಕ್ ಅಧ್ಯಕ್ಷ ಅಶ್ರಫ್ ಕೈಕಂಬ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಬಂಗ್ಲೆಗುಡ್ಡೆ ಜುಮಾ ಮಸೀದಿ ಮಾಲಿಕುದ್ದೀನಾರ್ ಉಸ್ತಾದ್ ಮುಸ್ತಫಾ ಸುಹೈಲ್ ದುಅ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಎಸ್’ಡಿಪಿಐ ಮಂಗಳೂರು ಉತ್ತರ ವಿಧಾನ ಸಭಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಡ್ಡೂರು ಮತ್ತು ಜೊತೆ ಕಾರ್ಯದರ್ಶಿ ಉಸ್ಮಾನ್ ಗುರುಪುರ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು. ಸಫರಾ ನಾಸಿರ್, ಡಾ. ಫಾತಿಮ , ಡಾ. ಶ್ವೇತ ಪ್ರಭು ಮತ್ತು ಸಿಸ್ಟರ್ ಲೊಲಿಟ ಪೆರೇರಾ ಅವರು ರಕ್ತದ ಮಹತ್ವದ ಬಗ್ಗೆ ಮಾತನಾಡಿದರು.
107 ರಕ್ತದಾನಿಗಳು ರಕ್ತದಾನ ಮಾಡುವ ಮೂಲಕ ಜೀವದಾನಿಗಳಾದರು. ರಿಯಾಝ್ ಎ.ಕೆ ಸ್ವಾಗತಿಸಿದರು. ಫಾರಿಶ್ ಸುರಲ್ಪಾಡಿ ಕಾರ್ಯಕ್ರಮವನ್ನು ನಿರೂಪಿಸಿದರು, ಸಾಬಿಕ್ ಕಂದಾವರ ಧನ್ಯವಾದ ಅರ್ಪಿಸಿದರು.
ಈ ಕಾರ್ಯಕ್ರಮದಲ್ಲಿ ಎಸ್’ಡಿಪಿಐ ಗುರುಪುರ ಗ್ರಾಮ ಸಮಿತಿ ಅಧ್ಯಕ್ಷ ಮುಸ್ತಫಾ ಎ.ಕೆ, ಬೂತ್ ಅಧ್ಯಕ್ಷ ಮುಸ್ತಫಾ ಗುರುಪುರ, ಗ್ರಾಮ ಪಂಚಾಯತ್ ಸದಸ್ಯೆ ರೆಹನಾ ಹನೀಫ್, ಲೆತೀಫ್ ಗುರುಪುರ, ಡಾ. ಜೆಸಿಕಾ, ಯೂಸುಫ್ ಸಾಮಿಯಾನ ಉಪಸ್ಥಿತರಿದ್ದರು.