ಗಾಝಾದಲ್ಲಿ ಮುಂದುವರೆದ ನಾಗರಿಕರ ಹತ್ಯೆ: ಶಾಲೆಯ ಮೇಲಿನ ದಾಳಿಗೆ 20 ಮಂದಿ ಹತ

Prasthutha|

ಗಾಝಾ: ಗಾಝಾ ಪ್ರದೇಶದಲ್ಲಿ ನಾಗರಿಕರ ಮೇಲೆ ಇಸ್ರೇಲ್ ದಾಳಿ ಮುಂದುವರೆಸಿದ್ದು, 20 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಗಾಝಾದ ಶಾಲೆಯ ಮೇಳೆ ಶೆಲ್ ದಾಳಿ ನಡೆದಿದ್ದು, ಈ ವೇಳೆ ಮಕ್ಕಳು ಅಸುನೀಗಿದ್ದಾರೆ ಎಂದು ಹಮಾಸ್ ನ ಆರೋಗ್ಯ ಇಲಾಖೆ ಪ್ರಕಟಿಸಿದೆ.

- Advertisement -

ಯುದ್ಧಪೀಡಿತ ಉತ್ತರ ಗಾಝಾದಲ್ಲಿ ಗಾಯಾಳುಗಳನ್ನು ಸಾಗಿಸುತ್ತಿದ್ದ ಆಯಂಬುಲೆನ್ಸ್ ಮೇಲೆ ಇಸ್ರೇಲಿನ ವಾಯುಪಡೆ ದಾಳಿ ಮಾಡಿದ ಮತ್ತೊಂದು ಘಟನೆಯಲ್ಲಿ 15 ಮಂದಿ ಮೃತಪಟ್ಟಿದ್ದಾರೆ.

ಯುದ್ಧ ವಿರಾಮದ ನಿರೀಕ್ಷೆಯನ್ನು ಅಲ್ಲಗೆಳೆದ ಇಸ್ರೇಲ್ ಪ್ರಧಾನಿ ಮತ್ತಷ್ಟು ನಾಗರಿಕರ ಹತ್ಯೆಯ ಮುನ್ಸೂಚನೆ ನೀಡಿದ ಬೆನ್ನಿಗೇ ಈ ಘಟನೆಗಳು ನಡೆದಿವೆ.

Join Whatsapp