ನಾಪೋಕ್ಲುವಿನಲ್ಲಿ ಕೊಡಗು ಸುನ್ನೀ ವೆಲ್ಫೇರ್ ಯುಎಇ ಸಮಿತಿಯಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ

Prasthutha|

►ನಾಲ್ಕು ಬಡ ಜೋಡಿಗಳಿಗೆ ಕಂಕಣ ಭಾಗ್ಯ ನೀಡಿದ “ಮಹರ್” ಸಾಮೂಹಿಕ ವಿವಾಹ

►ಮುಖ್ಯ ಅತಿಥಿಯಾಗಿ ಪಾಲ್ಗೊಂಡ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಶಾಫಿ ಸಅದಿ

- Advertisement -

ವರದಿ :ಝಕರಿಯ ನಾಪೋಕ್ಲು

ನಾಪೋಕ್ಲು :ಕೊಡಗು ಸುನ್ನೀ ವೆಲ್ಫೇರ್ ಅಸೋಸಿಯೇಷನ್ ಯುಎಇ ಸಮಿತಿ ಆಶ್ರಯದಲ್ಲಿ ನಾಪೋಕ್ಲು ಸಮೀಪದ ಚೆರಿಯಪರಂಬು ಶಾದಿಮಹಲ್ ಸಭಾಂಗಣದಲ್ಲಿ ಉಚಿತ ಸಾಮೂಹಿಕ ವಿವಾಹ “ಮಹರ್ “ಕಾರ್ಯಕ್ರಮ ಹಾಗೂ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಶಾಫಿ ಸಅದಿ ಯವರಿಗೆ ಸನ್ಮಾನ ಕಾರ್ಯಕ್ರಮವು ಸಂಭ್ರಮ ದಿಂದ ನಡೆಯಿತು.

ಕೊಡಗು ಸುನ್ನೀ ವೆಲ್ಫೇರ್ ಯುಎಇ ಸಮಿತಿಯು ಕಳೆದ ಮೂರು ವರ್ಷಗಳಿಂದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದು ಈ ಬಾರಿ 4 ಜೋಡಿಗಳಿಗೆ ನಡೆದ ನಿಖಾಹ್ ಕರ್ಮಕ್ಕೆ ಮುಂದಾಳತ್ವವನ್ನು ಸಯ್ಯಿದ್ ಮುಸ್ತಫಾ ಪೂಕೊಯ ತಂಙಳ್,
ಕೊಡಗು ಜಿಲ್ಲಾ ನಾಹಿಬ್ ಖಾಝಿ ಶಾದುಲಿ ಫೈಝಿ,ಕೂರ್ಗ್ ಜಂಇಯತ್ತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ,ಕುಂಜಿಲ ಮುದರ್ರಿಸ್ ನಿಝಾರ್ ಅಹ್ಸನಿ ಕಕ್ಕಡಿಪುರಂ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಪ್ರಾರ್ಥನೆ ಹಾಗೂ ಉದ್ಘಾಟನೆಯನ್ನು ಜಿಲ್ಲೆಯ ಖಾಝಿಗಳಾದ ಎಂ.ಎಂ. ಅಬ್ದುಲ್ಲಾ ಫೈಝಿ ಎಡಪಾಲ ಹಾಗೂ ಶಾದುಲಿ ಫೈಝಿ ಉಸ್ತಾದ್ ನೆರವೇರಿಸಿದರು.

ಈ ಬಾರಿ ಪಡಿಯಾಣಿ, ಎಮ್ಮೆಮಾಡು,ನಾಪೋಕ್ಲು ಹಾಗೂ ದೇವಣಗೆರೆಯ ಬಡಕುಟುಂಬದ ಹೆಣ್ಣು ಮಕ್ಕಳನ್ನು ಆಯ್ಕೆ ಮಾಡಲಾಗಿತ್ತು.ವಧು ವರರಿಗೆ ಬೇಕಾದ ಮಾಂಗಲ್ಯ ಚಿನ್ನಾಭರಣ,ವಸ್ತ್ರ, ಕೈ ಗಡಿಯಾರಗಳನ್ನು ಉದಾರವಾಗಿ ಸಮಿತಿಯಿಂದ ನೀಡಲಾಗಿದೆ.

ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಕೊಡಗು ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಶಾಫಿ ಸಅದಿ ಸೋಮವಾರಪೇಟೆ ಕೊಡಗು ಸುನ್ನೀ ವೆಲ್ಫೇರ್ ಅಸೋಸಿಯೇಷನ್ ಕಾರ್ಯ ವೈಖರಿಗಳನ್ನು ಕೊಂಡಾಡಿದರು. ಕೊಡಗನ್ನು ಕೇಂದ್ರೀಕರಿಸಿ ಅರಬ್ ಸಂಸ್ಥಾನದಲ್ಲಿ ಕಾರ್ಯಾಚರಿಸುವ ಕೊಡಗಿನ ಏಕೈಕ ಸಂಘಟನೆಯಾಗಿದ್ದು ಕೊಡಗಿನ ಬಡವರ ಪಾಲಿಗೆ ಸಹಾಯ, ಸಹಕಾರ ನೀಡಿ ಯಶಸ್ಸನ್ನು ಗಳಿಸುತ್ತಿರುವ ಸಂಘಟನೆ ಇದಾಗಿದೆ.ಈ ಸಂಘಟನೆ ಇವತ್ತು 4 ಜೋಡಿಗಳಿಗೆ ಕಂಕಣ ಭಾಗ್ಯವನ್ನು ನೀಡಿದ್ದು ಇನ್ನು ಕೂಡ ಹಲವಾರು ಕಾರ್ಯಕ್ರಮಗಳು ಇದರ ಮುಖಾಂತರ ನಡೆಯಲಿ, ಈ ಸಂಘಟನೆಯಲ್ಲಿ ಯಾರು ಕೂಡ ಶ್ರೀಮಂತರಿಲ್ಲ,ತಮ್ಮ ದುಡಿಮೆಯ ಅಲ್ಪಮೊತ್ತ ಕೊಡಗಿನ ಬಡವರ ಪಾಲಿಗೆ ಮೀಸಲಿಟ್ಟಿದ್ದಾರೆ. ಇಂತಹ ಸಂಘಟನೆಯನ್ನು ಎಲ್ಲರೂ ಪ್ರೋತ್ಸಾಹಿಸಬೇಕೆಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಶಾಫಿ ಸಅದಿ ಕರ್ನಾಟಕ ರಾಜ್ಯದ ಮುಸ್ಲಿಮರ ಅತೀ ದೊಡ್ಡ ಸಂಸ್ಥೆ ವಕ್ಫ್ ಮಂಡಳಿ ಇದರ ಅಭಿವೃದ್ಧಿ ಯಾದರೆ ನಮ್ಮ ಮುಸ್ಲಿಂ ಸಮುದಾಯ ಅಭಿವೃದ್ದಿ ಯಾಗುತ್ತೆ ಆರೀತಿಯಲ್ಲಿ ವಕ್ಫ್ ಜಾಗಗಳನ್ನು, ಸಂಸ್ಥೆಗಳನ್ನು ಅಭಿವೃದ್ಧಿ ಪತದತ್ತ ಕೊಂಡೊಯ್ದು ಮುಸ್ಲಿಂ ಸಮುದಾಯವನ್ನು ಶೈಕ್ಷಣಿಕವಾಗಿ ಮೇಲೆತ್ತುವ ಕಾರ್ಯದಲ್ಲಿ ನಾವೆಲ್ಲ ತೊಡಗಿಸಿ ಕೊಂಡಿದ್ದೇವೆ, ಸಾಮಾಜಿಕವಾಗಿ,ರಾಜಕೀಯ,ಧಾರ್ಮಿಕ, ಶೈಕ್ಷಣಿಕವಾಗಿ ಮುಂದೆ ಬರಲು ಶ್ರಮಿಸುವಂತೆ ಕರೆ ನೀಡಿ ಕೊಡಗು ಸುನ್ನೀ ವೆಲ್ಫೇರ್ ನಡೆಸುತ್ತಿರುವ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಶುಭ ಕೋರಿದರು.

ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಲತೀಫ್ ಸುಂಟಿಕೊಪ್ಪ ಮಾತನಾಡಿ ವೆಲ್ಫೇರ್ ಸಮಿತಿ ತೊಂದರೆಗೆ ಸಿಲುಕಿದವರ ಬೆನ್ನೆಲುಬಾಗಿ ನಿಂತು ಕೊಡಗಿನ ಬಡವರ ಹಾಗೂ ಕೊರೋನ ಸಂದರ್ಭದಲ್ಲಿ ಸಂಘಟನೆ ಮಾಡಿದ ಆಂಬುಲೆನ್ಸ್ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ವೆಲ್ಫೇರ್ ಸಮಿತಿಯವರನ್ನು ಕೊಂಡಾಡಿದರು.

ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಪಿ. ಎಂ.ಖಾಸಿಂ ನಾಪೋಕ್ಲು ಮಾತನಾಡಿ ಸಮುದಾಯವನ್ನು ಯಾರು ಪ್ರೀತಿಸುತ್ತಾರೋ ಅವರನ್ನ ದೇವರು ಪ್ರೀತಿಸುತ್ತಾರೆ,ತನ್ನ ವೈವಾಹಿಕ ಜೀವನವನ್ನು ಕನಸು ಕಂಡು ವರದಕ್ಷಿಣೆ ಪಿಡುಗಿನಿಂದ ತೊಂದರೆ ಅನುಭವಿಸುವ ವೈವಾಹಿಕ ಜೀವನಕ್ಕೆ ಕಾಲಿಡಲು ಸಾಧ್ಯವಾಗದೆ ಇರುವ ಎಷ್ಟೋ ಹೆಣ್ಣು ಮಕ್ಕಳು ಇದ್ದಾರೆ ನಮ್ಮ ಸಮುದಾಯದಲ್ಲಿ ಶ್ರೀಮಂತರ ಹೆಣ್ಣು ಮಕ್ಕಳು ವಿವಾಹವಾಗುವ ಸಂದರ್ಭ ಎಷ್ಟೋ ಹೆಣ್ಣು ಮಕ್ಕಳು ಮನೆಯಲ್ಲಿ ಕುಳಿತು ಬೇಸರ ಪಡುವವರಿದ್ದಾರೆ. ಅವರಿಗೆಲ್ಲಾ ಕೊಡಗು ಸುನ್ನೀ ವೆಲ್ಫೇರ್ ಸಮಿತಿಯು ಮಾದರಿಯಾಗಿದೆ ಎಂದರು.

ಈ ಸಂದರ್ಭ ಕೂರ್ಗ್ ಜಂಇಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ಅನ್ವಾರುಲ್ ಹುದಾ, ವಿರಾಜಪೇಟೆ, ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಅಬ್ದುಲ್ ರಹ್ಮಾನ್, ಎಸ್ ವೈ ಎಸ್ ರಾಜ್ಯಾಧ್ಯಕ್ಷ ಹಫೀಲ್ ಸಅದಿ ಕೊಳಕೇರಿ, ಎಸ್ ಎಸ್ ಎಫ್ ಜಿಲ್ಲಾಧ್ಯಕ್ಷ ಝುಬೈರ್ ಸಅದಿ, ಮುಹಮ್ಮದ್ ಹಾಜಿ ಕುಂಜಿಲ, ನಾಪೋಕ್ಲು ಜಮಾಅತ್ ಅಧ್ಯಕ್ಷ ಸಲೀಂ ಹ್ಯಾರಿಸ್, ನಿಯಾಜ್ ಸುಂಟಿಕೊಪ್ಪ, ಹೊದ್ದೂರು ಗ್ರಾಮ ಪಂಚಾಯಿತಿ ಸದಸ್ಯ ಹಂಝ ಕೊಟ್ಟಮುಡಿ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಮನ್ಸೂರ್ ಆಲಿ ಪ್ರಾಸ್ತಾವಿಕವಾಗಿ ಹಿತನುಡಿಗಳನ್ನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ ಎಸ್ ಡಬ್ಲ್ಯೂ ಎ ಇದರ ಜಿಸಿಸಿ ಅಧ್ಯಕ್ಷರಾದ ಅಬೂಬಕ್ಕರ್ ಹಾಜಿ ಕೊಟ್ಟಮುಡಿ ವಹಿಸಿ ಮಾತನಾಡಿ ವೆಲ್ಫೇರ್ ಸಮಿತಿ ಹಲವಾರು ಕಾರ್ಯಕ್ರಮಗಳ್ಳನ್ನು ಆಯೋಜಿಸಿದ್ದು ಸಾಮೂಹಿಕ ವಿವಾಹ 4ನೇ ವರ್ಷ, ಮನೆ ನಿರ್ಮಾಣ, ಕಿಟ್ ವಿತರಣೆ, ಬಾವಿ ನಿರ್ಮಾಣ, ಬಡವರಿಗೆ ಸಹಾಯ, ವಿದ್ಯಾಭ್ಯಾಸಕ್ಕೆ ಸಹಾಯ ಈಗೆ ಹಲವಾರು ಸಾಂತ್ವನ ಮೂಲಕ ಕೊಡಗು ಸುನ್ನೀ ವೆಲ್ಫೇರ್ ಕಾರ್ಯಾಚರಿಸುತ್ತಿದ್ದು.
ಸಂಘಟನೆಯ ಸಂಸ್ಥಾಪನೆಯ ವಿದ್ಯಾಭ್ಯಾಸಕ್ಕೆ ಸಹಕರಿಸಿದ ಓರ್ವವಿದ್ಯಾರ್ಥಿಯು ಎಲ್ ಎಲ್ ಬಿ ಪೂರ್ಣಗೊಳಿಸಿ ಹೊರಬಂದಿರುವ ಸಂತೋಷದ ವಿಷಯವನ್ನು ಎಲ್ಲರಲ್ಲಿ ಹಂಚಿಕೊಂಡರು.

ಸ್ವಾಗತವನ್ನು ಯುಎಇ ಅಧ್ಯಕ್ಷ ಉಸ್ಮಾನ್ ಹಾಜಿ ನಾಪೋಕ್ಲು ಹಾಗೂ ವಂದನೆಯನ್ನು ಪ್ರಧಾನ ಕಾರ್ಯದರ್ಶಿ ಸಲೀಂ ಗುಂಡಿಕೆರೆ, ನಿರೂಪನಣೆಯನ್ನು ನಾಪೋಕ್ಲು ಜಮಾಅತ್ ಕಾರ್ಯದರ್ಶಿ ಅಹ್ಮದ್ ಸಿ.ಎಚ್.ನೆರವೇರಿಸಿದರು.

ವೇದಿಕೆಯಲ್ಲಿ ಸ್ಥಳೀಯ ನಾಪೋಕ್ಲು ಮುದರ್ರಿಸ್ ಅಶ್ರಫ್ ಅಹ್ಸನಿ ಕಾಮಿಲ್ ಸಖಾಫಿ, ,ನಾಪೋಕ್ಲು ಓಎಸ್ ಎಫ್ ಅಧ್ಯಕ್ಷ ಶುಹೈಬ್,ಹ್ಯಾರಿಸ್ ಕುಂಜಿಲ,ಅರಫಾತ್ ನಾಪೋಕ್ಲು, ಅಹ್ಮದ್ ಚಾಮಿಯಾಲ್,ಅಬ್ದುಲ್ ಖಾದರ್ ತಂಙಳ್ ಅಯ್ಯಂಗೇರಿ, ಮಮ್ಮದ್ ಹಾಜಿ ಕೊಂಡಂಗೇರಿ,ಮೊಯಿದೀನ್ ಕುಟ್ಟಿ ಹಾಜಿ ಕೊಳಕೇರಿ, ಅಸ್ಕರ್ ಮೂರ್ನಾಡು, ಅಹ್ಮದ್ ಮದನಿ,ಎಮ್ಮೆಮಾಡು ಜಮಾಅತ್ ಅಧ್ಯಕ್ಷ ಅಬುಬಕ್ಕರ್ ಸಖಾಫಿ ,ಹ್ಯಾರಿಸ್ ಕೊಟ್ಟಮುಡಿ,ಹೊದ್ದೂರು ಗ್ರಾ.ಪ. ಸದಸ್ಯ ಕೆ.ಎಂ.ಮೊಯ್ದು,ಅಬ್ದುಲ್ಲಾ ಹಾಜಿ ನಾಪೋಕ್ಲು, ಎಸ್ ಎಸ್ ಎಫ್, ಎಸ್ ವೈ ಎಸ್ ಕರ್ನಾಟಕ ಮುಸ್ಲಿಂ ಜಮಾಅತ್ ಸದಸ್ಯರು,ನಾಪೋಕ್ಲು ಓ ಎಸ್ ಎಫ್ ಪದಾಧಿಕಾರಿಗಳು, ಸದಸ್ಯರು ಹಾಗೂ ವಧುವರರ ಕುಟುಂಬದ ಸದಸ್ಯರು ಮತ್ತಿತರರು ಹಾಜರಿದ್ದರು.

- Advertisement -