ಅತ್ಯಾಚಾರ ಆರೋಪ: ಮ್ಯಾಂಚೆಸ್ಟರ್‌ ಯುನೈಟೆಡ್‌ ಆಟಗಾರನ ಬಂಧನ

Prasthutha|

ಮ್ಯಾಂಚೆಸ್ಟರ್: ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಮ್ಯಾಂಚೆಸ್ಟರ್ ಯುನೈಟೆಡ್ ಸ್ಟ್ರೈಕರ್ ಮೇಸನ್ ಗ್ರೀನ್‌ವುಡ್ ಅವರನ್ನು ಬ್ರಿಟಿಷ್ ಪೊಲೀಸರು ಬಂಧಿಸಿದ್ದಾರೆ.

- Advertisement -

ಯುವತಿಯ ಮೇಲೆ ಅತ್ಯಾಚಾರ ಮತ್ತು ಹಲ್ಲೆ ನಡೆಸಿದ ಆರೋಪದ ಮೇಲೆ 21 ವರ್ಷದ ಮೇಸನ್ ಗ್ರೀನ್‌ವುಡ್‌ನನ್ನು, ಮೊದಲ ಬಾರಿ ಜನವರಿಯಲ್ಲಿ ಬಂಧಿಸಲಾಗಿತ್ತು. ಯುವತಿಯ ಜೊತೆಗಿನ ಚಿತ್ರಗಳು ಮತ್ತು ವೀಡಿಯೊಗಳನ್ನು ಗ್ರೀನ್‌ವುಡ್‌, ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದ.  ಬಳಿಕ ಯುವತಿಗೆ ಕೊಲೆ ಬೆದರಿಕೆ ಹಾಕಿದ್ದ. ಈ ಹಿನ್ನಲೆಯಲ್ಲಿ  ಯುವ ಆಟಗಾರನನ್ನು ವಿಚಾರಣೆಗೊಳಪಡಿಸಲಾಗಿತ್ತು. ಆದರೆ ಆ ಬಳಿಕ  ಗ್ರೀನ್‌ವುಡ್‌ಗೆ ಜಾಮೀನು ಸಿಕ್ಕಿತ್ತು.

” ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ ಆರೋಪದ  ಮೇಲೆ ಯುನೈಟೆಡ್ ಆಟಗಾರ  ಗ್ರೀನ್‌ವುಡ್‌ರನ್ನು ಗ್ರೇಟರ್ ಮ್ಯಾಂಚೆಸ್ಟರ್ ಪೊಲೀಸರು ಶನಿವಾರ ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ ಎಂದು ಯುರೋಪ್‌ ಮಾಧ್ಯಮಗಳು ವರದಿ ಮಾಡಿದೆ.

- Advertisement -

ಇಂಗ್ಲೆಂಡ್‌ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದ ಗ್ರೀನ್‌ವುಡ್‌, ಏಕೈಕ ಪಂದ್ಯವನ್ನಾಡಿದ್ದಾರೆ. ವರ್ಷಾರಂಭದಲ್ಲಿ ಯುವ ಆಟಗಾರನ ಮೇಲೆ ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ತಂಡದಿಂದ ಕೈಬಿಡಲಾಗಿತ್ತು. ಇಂಗ್ಲೆಂಡ್‌ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಯುನೈಟೆಡ್‌ ತಂಡದ ಜೊತೆಗೆ ತರಬೇತಿ ಪಡೆಯುವುದರಿಂದಲೂ ಅಮಾನತುಗೊಂಡರು. ಇದರ ಬೆನ್ನಲ್ಲೇ , ನೈಕ್‌ ಸಂಸ್ಥೆಯು ಗ್ರೀನ್‌ವುಡ್‌ ಅವರೊಂದಿಗಿನ ಪ್ರಾಯೋಜಕತ್ವದ ಒಪ್ಪಂದವನ್ನು ಕೊನೆಗೊಳಿಸಿತ್ತು.

Join Whatsapp