ಮ್ಯಾಂಚೆಸ್ಟರ್: ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಮ್ಯಾಂಚೆಸ್ಟರ್ ಯುನೈಟೆಡ್ ಸ್ಟ್ರೈಕರ್ ಮೇಸನ್ ಗ್ರೀನ್ವುಡ್ ಅವರನ್ನು ಬ್ರಿಟಿಷ್ ಪೊಲೀಸರು ಬಂಧಿಸಿದ್ದಾರೆ.
ಯುವತಿಯ ಮೇಲೆ ಅತ್ಯಾಚಾರ ಮತ್ತು ಹಲ್ಲೆ ನಡೆಸಿದ ಆರೋಪದ ಮೇಲೆ 21 ವರ್ಷದ ಮೇಸನ್ ಗ್ರೀನ್ವುಡ್ನನ್ನು, ಮೊದಲ ಬಾರಿ ಜನವರಿಯಲ್ಲಿ ಬಂಧಿಸಲಾಗಿತ್ತು. ಯುವತಿಯ ಜೊತೆಗಿನ ಚಿತ್ರಗಳು ಮತ್ತು ವೀಡಿಯೊಗಳನ್ನು ಗ್ರೀನ್ವುಡ್, ಆನ್ಲೈನ್ನಲ್ಲಿ ಪೋಸ್ಟ್ ಮಾಡಿದ್ದ. ಬಳಿಕ ಯುವತಿಗೆ ಕೊಲೆ ಬೆದರಿಕೆ ಹಾಕಿದ್ದ. ಈ ಹಿನ್ನಲೆಯಲ್ಲಿ ಯುವ ಆಟಗಾರನನ್ನು ವಿಚಾರಣೆಗೊಳಪಡಿಸಲಾಗಿತ್ತು. ಆದರೆ ಆ ಬಳಿಕ ಗ್ರೀನ್ವುಡ್ಗೆ ಜಾಮೀನು ಸಿಕ್ಕಿತ್ತು.
” ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಯುನೈಟೆಡ್ ಆಟಗಾರ ಗ್ರೀನ್ವುಡ್ರನ್ನು ಗ್ರೇಟರ್ ಮ್ಯಾಂಚೆಸ್ಟರ್ ಪೊಲೀಸರು ಶನಿವಾರ ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ ಎಂದು ಯುರೋಪ್ ಮಾಧ್ಯಮಗಳು ವರದಿ ಮಾಡಿದೆ.
ಇಂಗ್ಲೆಂಡ್ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದ ಗ್ರೀನ್ವುಡ್, ಏಕೈಕ ಪಂದ್ಯವನ್ನಾಡಿದ್ದಾರೆ. ವರ್ಷಾರಂಭದಲ್ಲಿ ಯುವ ಆಟಗಾರನ ಮೇಲೆ ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ತಂಡದಿಂದ ಕೈಬಿಡಲಾಗಿತ್ತು. ಇಂಗ್ಲೆಂಡ್ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಯುನೈಟೆಡ್ ತಂಡದ ಜೊತೆಗೆ ತರಬೇತಿ ಪಡೆಯುವುದರಿಂದಲೂ ಅಮಾನತುಗೊಂಡರು. ಇದರ ಬೆನ್ನಲ್ಲೇ , ನೈಕ್ ಸಂಸ್ಥೆಯು ಗ್ರೀನ್ವುಡ್ ಅವರೊಂದಿಗಿನ ಪ್ರಾಯೋಜಕತ್ವದ ಒಪ್ಪಂದವನ್ನು ಕೊನೆಗೊಳಿಸಿತ್ತು.