ಪಾಕಿಸ್ತಾನ: ಪಂಜಾಬ್ ಪ್ರಾಂತ್ಯದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಮರಿಯಮ್ ನವಾಜ್ ಆಯ್ಕೆ

Prasthutha|

ಲಾಹೋರ್: ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪುತ್ರಿ, ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ನಾಮನಿರ್ದೇಶಿತ ನಾಯಕಿ ಮರ್ಯಮ್ ನವಾಜ್ ಸೋಮವಾರ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮೊದಲ ಮಹಿಳಾ ಮುಖ್ಯಮಂತ್ರಿಯಾಗುವ ಮೂಲಕ ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದ್ದಾರೆ.

- Advertisement -


12 ಕೋಟಿ ಜನರು ನೆಲೆಸಿರುವ ಪಂಜಾಬ್ ಪ್ರಾಂತ್ಯದಲ್ಲಿ ನಡೆದ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷದ (ಪಿಟಿಐ) ಬೆಂಬಲಿತ ಸುನ್ನಿ ಇತ್ತೆಹಾದ್ ಕೌನ್ಸಿಲ್ (SIC)ನ ನಾಯಕ ರಾಣಾ ಅಫ್ತಾಬ್ ವಿರುದ್ಧ ಮರ್ಯಮ್ ಜಯಗಳಿಸಿದ್ದಾರೆ. ಎಸ್ ಐಸಿ ಸದಸ್ಯರ ಬಹಿಷ್ಕಾರದಿಂದಾಗಿ ರಾಣಾ ಅಫ್ತಾಬ್ ಅಹ್ಮದ್ ಶೂನ್ಯ ಮತಗಳನ್ನು ಪಡೆದು ಸೋಲನುಭವಿಸಿದ್ದಾರೆ.


ಪಂಜಾಬ್ ಅಸೆಂಬ್ಲಿಗೆ ಹೋಗುವ ಮುನ್ನ ಮರ್ಯಮ್ ಜತಿ ಉಮ್ರಾದಲ್ಲಿ ತನ್ನ ತಾಯಿಯ ಸಮಾಧಿಗೆ ಭೇಟಿ ನೀಡಿದರು.



Join Whatsapp