ಯುವ ಬಾಕ್ಸರ್‌ಗಳಿಗೆ ಅವಕಾಶ ಬಿಟ್ಟುಕೊಟ್ಟ ಮೇರಿ ಕೋಮ್‌

Prasthutha|

ಹೊಸದಿಲ್ಲಿ: ಆರು ಬಾರಿ ವಿಶ್ವ ಚಾಂಪಿಯನ್‌ ಗೆದ್ದುಕೊಂಡ ಎಂ.ಸಿ. ಮೇರಿ ಕೋಮ್‌ ಮುಂಬರುವ ಐಬಿಎ ಎಲೈಟ್‌ ಮಹಿಳಾ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ ಹಾಗೂ ಏಷ್ಯನ್‌ ಗೇಮ್ಸ್‌ ಟ್ರಯಲ್ಸ್ ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.

- Advertisement -

“ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುವ ಪೀಳಿಗೆಯ ಬಾಕ್ಸರ್‌ಗಳು ತಮ್ಮನ್ನು ಗುರುತಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕಿದೆ. ಅವರಿಗೆ ಪ್ರಮುಖ ಕೂಟಗಳಲ್ಲಿ ಮಾನ್ಯತೆ ಮತ್ತು ಅನುಭವ ಪಡೆಯಲು ಅನುಕೂಲವಾಗಬೇಕು . ಅದೇ ರೀತಿ 2022ರ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್ ಕಡೆಗೆ ಹೆಚ್ಚಿನ ಗಮನ ನೀಡಬೇಕಿದೆ’ ಎಂದು ಬಾಕ್ಸಿಂಗ್‌ ಫೆಡರೇಶನ್‌ ಆಫ್ ಇಂಡಿಯಾಗೆ ನೀಡಿರುವ ಮಾಹಿತಿಯಲ್ಲಿ ಮೇರಿ ಕೋಮ್‌ ತಿಳಿಸಿದ್ದಾರೆ.

“ಕಳೆದ ಎರಡು ದಶಕಗಳಿಂದ ಭಾರತೀಯ ಬಾಕ್ಸಿಂಗ್ ಗೆ ಅಪಾರ ಕೊಡುಗೆ ನೀಡುತ್ತಾ ಬಂದಿರುವ ಮೇರಿ ಕೋಮ್‌ ಅವರ ನಿರ್ಧಾರವನ್ನು ನಾವು ಸಂಪೂರ್ಣವಾಗಿ ಗೌರವಿಸುತ್ತೇವೆ. ಇತರ ಬಾಕ್ಸರ್‌ಗಳಿಗೆ ಅವಕಾಶ ಮಾಡಿ ಕೊಡಬೇಕೆಂಬ ಅವರ ನಿರ್ಧಾರ ಚಾಂಪಿಯನ್‌ ನಡತೆಗೆ ಸಾಕ್ಷಿಯಾಗಿದೆ’ ಎಂದು ಭಾರತದ ಬಾಕ್ಸಿಂಗ್‌ ಫೆಡರೇಷನ್‌ ಅಧ್ಯಕ್ಷ ಅಜಯ್‌ ಸಿಂಗ್‌ ಹೇಳಿದ್ದಾರೆ.



Join Whatsapp