ಉದ್ಯೋಗಿಗಳಿಗೆ ಮಾರುತಿ ಸುಜುಕಿ ಕಾರು ಉಡುಗೊರೆ; ತಮಿಳುನಾಡಿನ ಐಟಿ–ಎಂಜಿನಿಯರಿಂಗ್‌ ಕಂಪನಿಯ ಹೊಸ ಹೆಜ್ಜೆ

Prasthutha|

ಚೆನ್ನೈ: ತಮಿಳುನಾಡಿನ ಖ್ಯಾತ ಐಟಿ–ಎಂಜಿನಿಯರಿಂಗ್‌ ಕಂಪನಿಯಾದ ‘ಐಡಿಯಾಸ್‌2ಐಟಿ’ ಕಂಪನಿಯು ತನ್ನ 100 ಉದ್ಯೋಗಿಗಳಿಗೆ ಮಾರುತಿ ಸುಜುಕಿ ಕಾರುಗಳನ್ನು ಉಡುಗೊರೆಯಾಗಿ ನೀಡಿದೆ.

- Advertisement -

ಉದ್ಯೋಗಿಗಳು ನೀಡಿದ ಬೆಂಬಲ, ಪರಿಶ್ರಮ, ಅವರ ಕೊಡುಗೆಗಳನ್ನು ಪರಿಗಣಿಸಿ ಕಾರುಗಳನ್ನು ನೀಡಲಾಗಿದೆ ಎಂದು ಕಂಪನಿ ತಿಳಿಸಿದೆ.

ಕಂಪನಿಯ ಸಂಸ್ಥಾಪಕ ಮುಖ್ಯಸ್ಥರಾದ ಮುರಳಿ ವಿವೇಕಾನಂದನ್‌ ಅವರು ‘ಲಾಭಾಂಶ ಹಂಚಿಕೆ‘ ಕಾರ್ಯಕ್ರಮದಲ್ಲಿ ಉದ್ಯೋಗಿಗಳಿಗೆ ಕಾರುಗಳನ್ನು ವಿತರಣೆ ಮಾಡಿದ್ದಾರೆ.

- Advertisement -

ಕಂಪನಿಯ ಬೆಳವಣಿಗೆ ಹಾಗೂ ಆದಾಯವನ್ನು ಪರಿಗಣಿಸಿ ‘ಲಾಭಾಂಶ ಹಂಚಿಕೆ‘ ಉಪಕ್ರಮದ ಅಡಿಯಲ್ಲಿ ಮೊದಲ ಬಾರಿಗೆ ಉದ್ಯೋಗಿಗಳಿಗೆ ಕಾರುಗಳನ್ನು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇಂತಹ ಹೆಚ್ಚಿನ ಉಪಕ್ರಮಗಳನ್ನು ಪ್ರಾರಂಭಿಸಲಾಗುವುದು ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಗಾಯತ್ರಿ ವಿವೇಕಾನಂದನ್‌ ತಿಳಿಸಿದ್ದಾರೆ.

ಐಟಿ–ಎಂಜಿನಿಯರಿಂಗ್‌ ಸೇವೆ ಒದಗಿಸುವ ಈ ಕಂಪನಿ 2009ರಲ್ಲಿ ಸ್ಥಾ‍ಪನೆಯಾಯಿತು. ಕೇವಲ 6 ಜನ ಉದ್ಯೋಗಿಗಳಿಂದ ಆರಂಭವಾದ ಈ ಕಂಪನಿ ಇಂದು 500ಕ್ಕೂ ಹೆಚ್ಚು ತಂತ್ರಜ್ಞರನ್ನು ಹೊಂದಿದೆ. ಭಾರತದ ಪ್ರಮುಖ ನಗರಗಳು ಸೇರಿದಂತೆ ಅಮೆರಿಕ, ಮೆಕ್ಸಿಕೊ ದೇಶಗಳಲ್ಲೂ ಶಾಖೆಗಳನ್ನು ತೆರೆದಿದೆ.

 ‘ಐಡಿಯಾಸ್2ಐಟಿ‘ ಕಂಪನಿಯು ಫೇಸ್‌ಬುಕ್‌, ಮೈಕ್ರೊಸಾಪ್ಟ್‌, ಓರಾಕಲ್‌, ಮೊಟೊರಲಾ ಸೇರಿದಂತೆ ಜಾಗತಿಕ ಮಟ್ಟದಲ್ಲಿ ವಿವಿಧ ಕಂಪನಿಗಳಿಗೆ ಎಂಜಿನಿಯರಿಂಗ್‌ ಹಾಗೂ ಐಟಿ ಸೇವೆಗಳನ್ನು ನೀಡುತ್ತಿದೆ.

Join Whatsapp