ಗಂಡನ ಮನೆಯಲ್ಲಿ ಶೌಚಾಲಯ ಇಲ್ಲವೆಂದು ಆತ್ಮಹತ್ಯೆಗೆ ಶರಣಾದ ವಿವಾಹಿತೆ

Prasthutha|

ತಮಿಳುನಾಡು: ಗಂಡನ ಮನೆಯಲ್ಲಿ ಶೌಚಾಲಯ ಇಲ್ಲವೆಂಬ ಕಾರಣಕ್ಕೆ ಮನನೊಂದು ನವವಿವಾಹಿತೆಯೊಬ್ಬಳು ನೇಣಿಗೆ ಶರಣಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

- Advertisement -

ರಮ್ಯಾ(27) ಮೃತಪಟ್ಟ ನವವಿವಾಹಿತೆ ಎಂದು ಗುರುತಿಸಲಾಗಿದೆ.

ರಮ್ಯಾ ಕಾರ್ತಿಕೇಯನ್ ಎಂಬಾತನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಳು. ಇವರಿಬ್ಬರ ಮದುವೆ ಏಪ್ರಿಲ್ 6ರಂದು ನಡೆದಿತ್ತು. ಕಾರ್ತಿಕೇಯನ್ ಮನೆಯಲ್ಲಿ ಶೌಚಾಲಯ ಇರಲಿಲ್ಲ. ಹೀಗಾಗಿ, ಏಪ್ರಿಲ್ 7ರಂದು ರಮ್ಯಾ ಮರಳಿ ತವರು ಮನೆಗೆ ಹೋಗಿದ್ದರು. ಇಷ್ಟಾದರೂ ಕಾರ್ತಿಕೇಯನ್ ಮನೆಯಲ್ಲಿ ಶೌಚಾಲಯ ನಿರ್ಮಾಣ ಮಾಡಿಲ್ಲ. ಇದೇ ವಿಚಾರವಾಗಿ ಗಂಡ – ಹೆಂಡತಿ ನಡುವೆ ತೀವ್ರ ವಾಗ್ವಾದ ನಡೆದಿದ್ದು, ರಮ್ಯಾಳನ್ನ ಕೆಟ್ಟದಾಗಿ ನಿಂದಿಸಿದ್ದಾನೆ. ಇದರಿಂದ ಖಿನ್ನತೆಗೊಳಗಾಗಿರುವ ನವವಿವಾಹಿತೆ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾಳೆ.

- Advertisement -

ಘಟನೆ ಬೆನ್ನಲ್ಲೇ ರಮ್ಯಾ ತಾಯಿ ಮಂಜುಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.



Join Whatsapp