ವಿವಾಹಿತ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ; ದಾಂಪತ್ಯ ಕಲಹ ಶಂಕೆ

Prasthutha|

ಮಂಗಳೂರು: ಪತ್ನಿ ಮೇಲಿನ ಕೋಪದಲ್ಲಿ ವ್ಯಕ್ತಿಯೊಬ್ಬ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಕೋಟೆಕಾರು ಸಮೀಪದ ಕೊಲ್ಯ ಕಣೀರು ತೋಟ ಎಂಬಲ್ಲಿ ನಡೆದಿದೆ.

- Advertisement -

 ಆತ್ಮಹತ್ಯೆಗೈದ ವ್ಯಕ್ತಿಯನ್ನುಕಣೀರು ತೋಟ ನಿವಾಸಿ ಪ್ರವೀಣ್ ಪೂಜಾರಿ(34) ಯಾನೆ ಪವನ್ ಎಂದು ಗುರುತಿಸಲಾಗಿದೆ.

ಖಾಸಗಿ ಬಸ್ಸಿನಲ್ಲಿ ಚೆಕ್ಕರ್ ಆಗಿ ಕೆಲಸ ನಿವರ್ಹಿಸುತ್ತಿದ್ದ ಪ್ರವೀಣ್ ಸೋಮವಾರ ಸಂಜೆ 6 ಗಂಟೆಗೆ ಮನೆಗೆ ಬಂದು ಕೋಣೆಯೊಳಗೆ ತೆರಳಿದ್ದು, ಈ ವೇಳೆ ಪ್ರವೀಣ್ ತಾಯಿ ಮನೆ ಹೊರಗಡೆ ಬೀಡಿ ಕಟ್ಟುತ್ತಿದ್ದರೆನ್ನಲಾಗಿದೆ. ಸಂಜೆ 7.30 ಗಂಟೆಗೆ ಪತ್ನಿ ಕೆಲಸದಿಂದ ಮರಳಿದಾಗ ಕೋಣೆಯೊಳಗಿನ ಪಕ್ಕಾಸಿಗೆ ಪ್ರವೀಣ್ ಶಾಲಿನಿಂದ ನೇಣು ಬಿಗಿದು ಆತ್ಮಹತ್ಯೆಗೈದಿರುವುದು ಕಂಡುಬಂದಿದೆ.

- Advertisement -

ಪ್ರವೀಣ್ ಪ್ರೇಮ ವಿವಾಹವಾಗಿದ್ದು ದಂಪತಿಗೆ ಐದು ವರ್ಷದ ಮುದ್ದಾದ ಹೆಣ್ಣು ಮಗು ಇದೆ. ಆತ್ಮಹತ್ಯೆಗೆ ದಾಂಪತ್ಯ ಕಲಹವೇ ಕಾರಣ ಎಂದು ಶಂಕಿಸಲಾಗಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp