ಮುಸ್ಲಿಮ್ ಅಪ್ರಾಪ್ತೆಯೊಂದಿಗಿನ ಮದುವೆ ಪೋಕ್ಸೋ ಕಾಯ್ದೆಯಡಿ ಅಪರಾಧ: ಕೇರಳ ಹೈಕೋರ್ಟ್

Prasthutha|

ತಿರುವನಂತಪುರಂ: ಮುಸ್ಲಿಮ್ ಸಮುದಾಯದಲ್ಲಿ ನಡೆಯುವ ಅಪ್ರಾಪ್ತೆಯೊಂದಿಗಿನ ಮದುವೆಯನ್ನು ಪೋಕ್ಸೋ ಕಾಯ್ದೆಯಿಂದ ವಿನಾಯಿತಿ ನೀಡಲು ಸಾಧ್ಯವಿಲ್ಲ ಮತ್ತು ಅಪ್ರಾಪ್ತೆ ಹೆಂಡತಿಯ ಜೊತೆಗಿನ ದೈಹಿಕ ಸಂಬಂಧವು ಈ ಕಾಯ್ದೆಯನ್ವಯ ಅಪರಾಧವಾಗಿರುತ್ತದೆ ಎಂದು ಕೇರಳ ಹೈಕೋರ್ಟ್ ಆದೇಶ ಹೊರಡಿಸಿದೆ.

- Advertisement -

ಪಶ್ಚಿಮ ಬಂಗಾಳದ 16ರ ಹರೆಯದ ಹುಡುಗಿಯ ಮೇಲೆ ನಡೆದ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಆರೋಪಿಯ ಅರ್ಜಿಯನ್ನು ವಜಾಗೊಳಿಸಲಾಗಿದೆ. ದೂರುದಾರೆ ಅಪ್ರಾಪ್ತೆಯಾಗಿದ್ದರೆ ಪ್ರಕರಣವು ಪೋಕ್ಸೋ ಕಾಯ್ದೆಯಡಿಯಲ್ಲಿ ಅಪರಾಧವಾಗಿರುತ್ತದೆ ಎಂದು ನ್ಯಾಯಮೂರ್ತಿ ಬಚು ಕುರಿಯನ್ ಥಾಮಸ್ ಅವರ ಏಕ ಸದಸ್ಯ ಪೀಠ ತಿಳಿಸಿದೆ.

31 ವರ್ಷದ ಯುವಕ ಅಪ್ರಾಪ್ತೆಯನ್ನು ಅಪಹರಿಸಿ ಹಲವಾರು ಸಲ ದೈಹಿಕ ಸಂಬಂಧ ಬೆಳೆಸಿದ ಬಳಿಕ ಸಂತ್ರಸ್ತೆಯನ್ನು ಮದುವೆಯಾಗಿದ್ದನು ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು.

- Advertisement -

ಈ ಮಧ್ಯೆ ನಾನು ಬಾಲಕಿಯನ್ನು ಕಾನೂನುಬದ್ಧವಾಗಿ ಮದುವೆಯಾಗಿದ್ದು, ಮುಸ್ಲಿಮ್ ವೈಯಕ್ತಿಯ ಕಾನೂನು ಮಂಡಳಿಯು ಋತುಮತಿಯಾದವರನ್ನು ಮದುವೆಯಾಗಲು ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಪೋಕ್ಸೋ ಕಾಯ್ದೆಯಡಿಯಲ್ಲಿ ತನ್ನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಆರೋಪಿ ವಾದಿಸಿದ್ದನು. ಆದರೆ ಈತನ ವಾದವನ್ನು ಒಪ್ಪಿಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ಬಾಲ್ಯ ವಿವಾಹವು ಹುಟ್ಟುವ ಮಗುವಿನ ಬೆಳವಣಿಗೆಗೆ ತಡೆಯೊಡ್ಡುತ್ತದೆ. ಇದು ಸಮಾಜಕ್ಕೆ ತೊಡಕಾಗಿದೆ ಎಂದು ಹೇಳಿದ ನ್ಯಾಯಾಧೀಶರು, ಆರೋಪಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದಾರೆ.

Join Whatsapp