ಏಳು ಗಂಟೆಗಳ ಕಾಲ ಫೇಸ್ಬುಕ್, ವಾಟ್ಸಾಪ್ ಸ್ಥಗಿತ| ಝುಕರ್ಬರ್ಗ್ ಕಳೆದುಕೊಂಡ ಬಿಲಿಯನ್‌ಗಳೆಷ್ಟು ಗೊತ್ತೇ?

Prasthutha|

ನ್ಯೂಯಾರ್ಕ್: ನಿನ್ನೆ ರಾತ್ರಿ ವಿಶ್ವದಾದ್ಯಂತ ಫೇಸ್‌ಬುಕ್‌, ಇನ್ಸ್ಟಾಗ್ರಾಮ್‌ ಹಾಗೂ ವಾಟ್ಸಾಪ್ ಸೇವೆಯಲ್ಲಿ ಕೆಲ ಕಾಲ ವ್ಯತ್ಯಯವುಂಟಾಗಿದ್ದು, ನೆಟ್ಟಿಗರು ಪರದಾಡುವಂತಾಗಿತ್ತು. ಈ ಹಿನ್ನೆಲೆಯಲ್ಲಿ ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಝುಕರ್ಬರ್ಗ್ ಬರೋಬ್ಬರಿ 7 ಬಿಲಿಯನ್ ಡಾಲರ್‌ ಕಳೆದುಕೊಂಡಿದ್ದಾರೆ.

- Advertisement -

ಫೇಸ್‌ಬುಕ್‌ ಕಂಪನಿಯ ವಿರುದ್ಧ ಹಲವರು ನಿನ್ನೆ ರಾತ್ರಿ ಟ್ವಿಟ್ಟರ್‌ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಸೇವೆಯ ವ್ಯತ್ಯಯ, ಆಕ್ರೋಶದ ಪರಿಣಾಮ ಝುಕರ್ಬರ್ಗ್ ಭಾರೀ ಮೊತ್ತವನ್ನು ಕಳೆದುಕೊಂಡಿದ್ದಾರೆ.

ಸೇವೆ ವ್ಯತ್ಯಯವಾದ ಕೆಲವೇ ಗಂಟೆಗಳಲ್ಲಿ ಮಾರ್ಕ್ ಝುಕರ್ಬರ್ಗ್ ವೈಯಕ್ತಿಕ ಸಂಪತ್ತು ಸುಮಾರು 7 ಬಿಲಿಯನ್ ಡಾಲರ್‌ಗಳಷ್ಟು ಕುಸಿದಿದೆ.  ಷೇರುಗಳು ಸೋಮವಾರ ಶೇ. 5ರಷ್ಟು ಕುಸಿದಿದೆ. ಅಲ್ಲದೆ, ಸೆಪ್ಟೆಂಬರ್ ಮಧ್ಯಭಾಗದಿಂದ ಒಟ್ಟಾರೆ ಸುಮಾರು ಶೇ. 15ರಷ್ಟು ಷೇರುಗಳ ಮೌಲ್ಯ ಕುಸಿದಿದೆ.

- Advertisement -

ಝುಕರ್ಬರ್ಗ್ ಆಸ್ತಿ ಮೌಲ್ಯ 120.9 ಬಿಲಿಯನ್ ಡಾಲರ್‌ಗೆ ಕುಸಿದಿದ್ದು, ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನಲ್ಲಿ ಅಗ್ರ ಶ್ರೀಮಂತರ ಪೈಕಿ 5ನೇ ಸ್ಥಾನಕ್ಕಿಳಿಯುವುದರೊಂದಿಗೆ ಬಿಲ್‌ ಗೇಟ್ಸ್‌ ನಂತರದ ಸ್ಥಾನವನ್ನು ಪಡೆದಿದ್ದಾರೆ.  ಸೆಪ್ಟೆಂಬರ್ 13ರಂದು ಸುಮಾರು 140 ಶತಕೋಟಿ ಡಾಲರ್ ಆಸ್ತಿ ಮೌಲ್ಯ ಹೊಂದಿದ್ದ ಝುಕರ್ಬರ್ಗ್ ಇದೀಗ ಬರೋಬ್ಬರಿ ಸುಮಾರು 19 ಬಿಲಿಯನ್ ಡಾಲರ್‌ ಸಂಪತ್ತನ್ನು ಕಳೆದುಕೊಂಡಿದ್ದಾರೆ.

Join Whatsapp