ಮಂಗಳೂರಿನಲ್ಲಿ ಗೊಂಡೆ ಹೂವುಗಳ ಭರಾಟೆ

Prasthutha|

ಮಂಗಳೂರು: ಮಂಗಳೂರಿನಲ್ಲಿ ಗೊಂಡೆ ಹೂವು ಅಥವಾ ಮೆರಿಗೋಲ್ಡ್ ಭರಾಟೆ ಜೋರಾಗಿದೆ. ಬೆಳಗ್ಗಿನ ಜಾವ ನಗರದ ಹಲವೆಡೆ ಈ ಹೂವುಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ.

- Advertisement -

ಕೊಲ್ಕತ್ತದ ಮುಲ್ಲಿಕ್ ಘಾಟ್ ಹೂವಿನ ಮಾರುಕಟ್ಟೆ ಏಷ್ಯಾದಲ್ಲೇ ದೊಡ್ಡ ಮಾರುಕಟ್ಟೆಯಾಗಿದೆ. ಇದು 130 ವರ್ಷ ಹಳೆಯ ಮಾರುಕಟ್ಟೆಯಾಗಿದ್ದು, ಇಲ್ಲಿ 4,000 ಮಂದಿ ಹೂವಿನ ಮಾರಾಟದಲ್ಲಿ ತೊಡಗಿರುತ್ತಾರೆ.

ತಮಿಳುನಾಡಿನ ಮಧುರೈ, ಬೆಂಗಳೂರಿನ ಸಿಟಿ ಮಾರುಕಟ್ಟೆ ಸಹ ಭಾರತದ ಪ್ರಮುಖ ಹೂವಿನ ಮಾರುಕಟ್ಟೆಗಳಾಗಿವೆ.

- Advertisement -

ಸಗಟು ಹೂವಿನ ವ್ಯಾಪಾರ ಮತ್ತು ಹೂವಿನ ರಫ್ತಿನಲ್ಲಿ ಬೆಂಗಳೂರಿನ ಸಗಟು ಮಾರುಕಟ್ಟೆ ಬಹು ಪ್ರಸಿದ್ಧವಾದುದು. ಮುಂಜಾನೆ ಮೂರು ಮೂರೂವರೆ ಗಂಟೆಯಿಂದಲೆ ಸಗಟು ಹೂವಿನ ವ್ಯಾಪಾರ ಆರಂಭವಾಗುತ್ತದೆ. ಬೆಳಿಗ್ಗೆ ಆರು ಗಂಟೆಯೊಳಗೆ ಸಗಟು ಮಾರಾಟ ಮುಗಿದಿರುತ್ತದೆ.

ಇನ್ನುಳಿದಂತೆ ಬೆಂಗಳೂರಿನ ಕೃಷ್ಣರಾಜೇಂದ್ರ ಮಾರುಕಟ್ಟೆ ಇಲ್ಲವೇ ಸಿಟಿ ಮಾರುಕಟ್ಟೆಯಲ್ಲದೆ ಬೇರೆ ಕಡೆ ಕೂಡ ಸಾವಿರಾರು ಮಂದಿ ಹೂವಿನ ಚಿಲ್ಲರೆ ಮಾರಾಟಗಾರರು ಕಾಣಿಸುತ್ತಾರೆ.

ಮಂಗಳೂರಿನ ಹೂವಿನ ಮಾರುಕಟ್ಟೆ ಸಹ ಸ್ವಾತಂತ್ರ್ಯ ಪೂರ್ವದ್ದು. ಎಲ್ಲ ನಗರಗಳಲ್ಲೂ ಈಗ ಚಿಲ್ಲರೆ ಹೂವಿನ ಮಾರಾಟಗಾರರು ನಾನಾ ಕಡೆ ಕಂಡುಬರುತ್ತಾರೆ.

ತುಳುವರು ನಿತ್ಯ ಪೂಜೆಗೆ ಕಾಡು ಇಲ್ಲವೇ ತಮ್ಮ ತೋಟದ ಹೂವು ಬಳಸುತ್ತಿದ್ದರು. ದೀಪಾವಳಿಗಂತೂ ಕಾಡು ಮೇಡಿನ ಹೂವು ತರುವುದು ತುಳುವರಲ್ಲಿ ಇಂದಿಗೂ ಕಡ್ಡಾಯ. ಮದುವೆಯಂಥ ಸಂದರ್ಭಗಳಲ್ಲಿ ಮಲ್ಲಿಗೆ ಕೆಲವೊಮ್ಮೆ ಕನಕಾಂಬರ ಬಳಸುತ್ತಿದ್ದರು.

ಕಳೆದೊಂದು ದಶಕದಿಂದ ಮಂಗಳೂರಿಗೆ ಘಟ್ಟದ ಮತ್ತು ಬೆಂಗಳೂರು ಕಡೆಯ ಹೂವು ಧಾರಾಳವಾಗಿ ಬರುವುದರಿಂದ ಒಂದು ಮಟ್ಟಿಗೆ ಹೂವು ಅಗ್ಗವಾಗಿವೆ. ದೇವರ ಉತ್ಸವ, ಜಾತ್ರೆಯೆಂದು ಹೂವು ಕೊಳ್ಳುವವರ ಸಂಖ್ಯೆಯೂ ಹೆಚ್ಚಿದೆ. ಹೂವಿನ ಮಾಲೆ ಹಾಕುವ ಸಂಸ್ಕೃತಿಯೂ ಇತ್ತೀಚೆಗೆ ಇಲ್ಲೆಲ್ಲ ಅಧಿಕವಾಗಿದೆ.

ಗೊಂಡೆ ಹೂವು ಇಲ್ಲವೇ ಮೆರಿಗೋಲ್ಡ್ ಈಗ ಭಾರೀ ವಾಣಿಜ್ಯ ಮಹತ್ವ ಪಡೆದಿರುವುದು ತುಳುವರಿಗೆ ಅಚ್ಚರಿಯ ಸಂಗತಿ. ಬೆಂಗಳೂರು ಕಡೆ ಅವೆಲ್ಲ ಎಂದೋ ವಾಣಿಜ್ಯ ಮಹತ್ವ ಪಡೆದಿವೆ. ಅವಿಭಜಿತ ಕೋಲಾರ ಜಿಲ್ಲೆಯು ಪ್ರಮುಖ ಹೂವು ಬೆಳೆಯುವ ಜಿಲ್ಲೆಯಾಗಿ ಈಗ ಹೆಸರು ಪಡೆದಿದೆ.

Join Whatsapp