ಮರಾಠ ಮುಖಂಡ ವಿನಾಯಕ್ ಮೇಟೆ ಕಾರು ಅಪಘಾತಕ್ಕೆ ಬಲಿ

Prasthutha|

ಮಹಾರಾಷ್ಟ್ರ: ಇಂದು ಬೆಳಗ್ಗೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ ವೇಯಲ್ಲಿ ನಡೆದ ಅಪಘಾತದಲ್ಲಿ ಮರಾಠ ಸಮುದಾಯದ ಮುಖಂಡ, ಮಾಜಿ ಎಂಎಲ್‌ ಸಿ ವಿನಾಯಕ್ ಮೇಟೆ ಸಾವನ್ನಪ್ಪಿದ್ದಾರೆ.

ಎಕ್ಸ್‌ ಪ್ರೆಸ್‌ ವೇಯ ಮಡಪ್ ಸುರಂಗದ ಬಳಿ ಮತ್ತೊಂದು ವಾಹನ ಇವರು ಸಂಚರಿಸುತ್ತಿದ್ದ ವಾಹನಕ್ಕೆ ಢಿಕ್ಕಿಯಾಗಿದ್ದು, ಅಪಘಾತದ ತೀವ್ರತೆಗೆ ವಿನಾಯಕ ಮೇಟೆ ಸಂಚರಿಸುತ್ತಿದ್ದ ಕಾರು ನಜ್ಜುಗುಜ್ಜಾಗಿದೆ. ಅಲ್ಲದೇ ಕಾರಿನಲ್ಲಿದ್ದ ಇತರರೂ ಗಾಯಗೊಂಡಿದ್ದಾರೆ.

- Advertisement -

ಮಹಾರಾಷ್ಟ್ರದ ವಿಧಾನ ಪರಿಷತ್‌ ನ ಮಾಜಿ  ಸದಸ್ಯರಾಗಿರುವ ಮೇಟೆ ಅವರು ಪತ್ನಿ, ಒಬ್ಬ ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.

ಮೇಟೆ ಅವರ ನಿಧನಕ್ಕೆ ರಾಜ್ಯದ ಹಲವಾರು ರಾಜಕಾರಣಿಗಳು ಸಂತಾಪ ಸೂಚಿಸಿದ್ದಾರೆ.

- Advertisement -