ತಂದೆಯನ್ನು ನೋಡಲು ವೇಷ ಬದಲಿಸಿ ಬಂದ ಮಾವೋ ನಾಯಕನ ಬಂಧನ

Prasthutha|

ಚೆನ್ನೈ: ತಂದೆಯನ್ನು ನೋಡಲು ವೇಷ ಬದಲಿಸಿ ಬಂದ ಮಾವೋ ನಾಯಕನನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.

- Advertisement -

ವೆಲ್ಲೂರಿನ ಸಿಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತನ್ನ ತಂದೆಯನ್ನು ಭೇಟಿ ಮಾಡಲು ಜಾರ್ಖಂಡ್ ಮೂಲದ ಮಾವೋವಾದಿ ನಾಯಕ ವೀರೇಂದ್ರ ಕುಮಾರ್ ವೇಷ ಬದಲಿಸಿ ಬಂದಿದ್ದ ಎಂದು ವರದಿಯಾಗಿದೆ.

ಮಾವೋವಾದಿ ನಾಯಕ ವೀರೇಂದ್ರ ಕುಮಾರ್ ಆಗಮಿಸುತ್ತಿರುವ ಗುಪ್ತಚರ ಮಾಹಿತಿ ಪಡೆದ ಪೊಲೀಸರು ಸಿಎಂಸಿ ಆಸ್ಪತ್ರೆಯನ್ನು ಸುತ್ತುವರಿದಿದ್ದರು . ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಮಾವೋ ನಾಯಕನಿಗೆ ತಮಿಳುನಾಡಿನಿಂದ ನೆರವು ಸಿಕ್ಕಿದೆಯೇ ಎಂಬುದನ್ನು ತನಿಖೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.

Join Whatsapp