ಪುತ್ತೂರು: ಸಾಕು ನಾಯಿಗಳ ಸಾಮೂಹಿಕ ಹತ್ಯೆ; ಊಟದಲ್ಲಿ ವಿಷವಿಕ್ಕಿ ಕೊಂದಿರುವ ಶಂಕೆ

Prasthutha|

ಪುತ್ತೂರು: ಪುತ್ತೂರು ನಗರದ ಹೊರವಲಯದ ಬನ್ನೂರು ಗ್ರಾಮದ ಅಡೆಂಚಿನಡ್ಕ- ಕುಂಟ್ಯಾನ ರಸ್ತೆಯಲ್ಲಿ ಸದಾಶಿವ ಕಾಲೊನಿ ಪರಿಸರದಲ್ಲಿ ಸುಮಾರು ಹತ್ತಕ್ಕಿಂತಲೂ ಅಧಿಕ ಸಾಕು ನಾಯಿಗಳನ್ನು ಅಮಾನುಷವಾಗಿ ಹತ್ಯೆ ಮಾಡಿ ಬಿಸಾಡಲಾಗಿದೆ.

- Advertisement -

 ಅಡೆಂಚಿನಡ್ಕ, ಕುಂಟ್ಯಾನ, ಸದಾಶಿವ ಕಾಲೋನಿಯಲ್ಲಿನ ನಿವಾಸಿಗಳು ಸಾಕಿರುವ ನಾಯಿಗಳೇ ಇವಾಗಿದ್ದು, ಇವುಗಳು ಸಾಮಾನ್ಯವಾಗಿ ಹೊರಗಡೆ ಅಡ್ಡಾಡುವಾಗ, ಅವುಗಳಿಗೆ ಸಾಮೂಹಿಕವಾಗಿ ಊಟ ನೀಡಲಾಗಿದೆ. ಅವುಗಳಿಗೆ ನೀಡಲಾಗಿದ್ದ ನೀರಿನಲ್ಲೋ ಅಥವಾ ಊಟದಲ್ಲೋ ವಿಷವಿಕ್ಕಿ ಯಾರೋ ಸಾಮೂಹಿಕವಾಗಿ ಹತ್ಯೆ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಈ ಬಗ್ಗೆ ತಕ್ಷಣ ಪ್ರಕರಣ ದಾಖಲಿಸಿಕೊಂಡು ಸಾಕು ನಾಯಿಗಳ ಮಾರಣ ಹೋಮ ಮಾಡಿದ ಆರೋಪಿಗಳನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಹೋರಾಟಗಾರರಾದ ರಾಜೇಶ್‌ ಬನ್ನೂರು ಮತ್ತು ಶಶಿಧರ ವಿ.ಎನ್‌. ಪುತ್ತೂರು ಸಹಾಯಕ ಆಯುಕ್ತರು ಹಾಗೂ ಪುತ್ತೂರು ನಗರ ಪೊಲೀಸ್‌ ಠಾಣಾಧಿಕಾರಿಗೆ ದೂರು ನೀಡಿದ್ದಾರೆ.

Join Whatsapp