ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಖಾನ್ ‘ಬಲಿ ಕಾ ಬಕ್ರಾ’ : SDPI ರಾಜ್ಯಾಧ್ಯಕ್ಷ ವ್ಯಂಗ್ಯ

Prasthutha|

ಬೆಂಗಳೂರು : ರಾಜ್ಯಸಭೆ ಚುನಾವಣೆಗೆ ರಾಜ್ಯಾದ್ಯಂತ ಕಾವೇರಿದ ಪೈಪೋಟಿ ನಡೆಯುತ್ತಿದ್ದು ಸೋಲು ಖಚಿತ ಎಂದು ಗೊತ್ತಿದ್ದರೂ ಪಕ್ಷದ ಎರಡನೇ ಅಭ್ಯರ್ಥಿಯಾಗಿ ಕಾಂಗ್ರೆಸ್ ನಿಂದ ಮನ್ಸೂರ್ ಖಾನ್ ಅವರನ್ನು ಕಣಕ್ಕಿಳಿಸಿದ್ದು ಮನ್ಸೂರ್ ಬಲಿ ಕಾ ಬಕ್ರಾ ಎಂದು ಎಸ್ ಡಿಪಿಐ ರಾಜ್ಯಾಧ್ಯಕ್ಷ ಮಜೀದ್ ಕೊಡ್ಲಿಪೇಟೆ ವ್ಯಂಗ್ಯವಾಡಿದ್ದಾರೆ.

- Advertisement -

ಅತ್ತ ತಾನೂ ಗೆಲ್ಲದೆ ಜೆಡಿಎಸ್ ಅನ್ನೂ ಬೆಂಬಲಿಸದ ಕಾಂಗ್ರೆಸ್, ಬಿಜೆಪಿಗೆ ಬೆಂಬಲ ಕೋರುವ ಅನಿವಾರ್ಯತೆಯನ್ನು ಸೃಷ್ಟಿಸಿಕೊಂಡಿದ್ದು ಈ ಬಗ್ಗೆ ನಿನ್ನೆ ಮಾಜಿ ಮುಖ್ಯಮಂತ್ರಿ ಎಚ್ ಡಿಕೆ ಕಿಡಿಕಾರಿದ್ದರು.

ಈ ಕುರಿತು ಇಂದು ಎಸ್ ಡಿ ಪಿ ಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್  ಇಂದು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದು, ಗೆಲ್ಲಲು ಅಗತ್ಯ ಮತ ಇಲ್ಲದಿದ್ದರೂ ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್  ತನ್ನ ಎರಡನೇ ಅಭ್ಯರ್ಥಿಯಾಗಿ ಮನ್ಸೂರ್ ಖಾನ್ ಗೆ ಬಿ ಫಾರಂ ನೀಡಿ “ಬಲಿ ಕಾ ಬಕ್ರಾ’ ಮಾಡಿದೆ. ಕಾಂಗ್ರೆಸ್ ಗೆ ಮುಸ್ಲಿಮರ ಮೇಲೆ ನಿಜವಾದ ಕಾಳಜಿ ಇದ್ದಿದ್ದರೆ ಒಂದನೇ ಅಭ್ಯರ್ಥಿಯಾಗಿ ಏಕೆ ಮನ್ಸೂರ್ ಖಾನರನ್ನು ಆಯ್ಕೆ ಮಾಡಿಲ್ಲ? ಎಂದು ಪ್ರಶ್ನಿಸಿದ್ದಾರೆ.

- Advertisement -

ಒಬ್ಬ ಅಭ್ಯರ್ಥಿಗೆ ತಲಾ 45 ರಂತೆ ಮತಗಳು ಬೇಕಾಗಿದ್ದು ಒಟ್ಟು 4 ಸ್ಥಾನಗಳಲ್ಲಿ ಬಿಜೆಪಿ 2 ಮತ್ತು ಕಾಂಗ್ರೆಸ್ 1 ಸ್ಥಾನವನ್ನು ಅನಾಯಾಸವಾಗಿ ಗೆದ್ದುಕೊಳ್ಳಬಹುದು. ಹಾಗಾಗಿ ರಾಜ್ಯಸಭೆಯ 4 ನೇ ಸ್ಥಾನಕ್ಕೆ 3 ಪಕ್ಷಗಳಿಂದಲೂ ತೀವ್ರ ಪೈಪೋಟಿ ನಡೆಯುತ್ತಿದ್ದು ಜೆಡಿಎಸ್ ನಲ್ಲಿ ಕೇವಲ 32 ಮತಗಳಿದ್ದು ಅಭ್ಯರ್ಥಿ ಕುಪೇಂದ್ರ ರೆಡ್ಡಿ ಸ್ಥಾನ ಭದ್ರಪಡಿಸಲು ಇನ್ನೂ 13 ಮತಗಳ ಅನಿವಾರ್ಯತೆಯಿದೆ.

ಮತ್ತೊಂದು ಕಡೆ 2 ಸ್ಥಾನಗಳನ್ನು ಪಡೆದುಕೊಂಡ ಬಳಿಕ ಬಿಜೆಪಿಗೆ ಹೆಚ್ಚುವರಿಯಾಗಿ  32 ಮತ್ತು ಕಾಂಗ್ರೆಸ್ 1 ಸ್ಥಾನವನ್ನು ಉಳಿಸಿಕೊಂಡ ಬಳಿಕ 25 ಮತಗಳು ಉಳಿದುಕೊಳ್ಳುತ್ತದೆ. ಆದ್ದರಿಂದ ಬಿಜೆಪಿ ತನ್ನ ಮೂರನೇ ಅಭ್ಯರ್ಥಿಯಾಗಿ ಲೆಹರ್ ಸಿಂಗ್ ರ ನ್ನು ತಡರಾತ್ರಿ ಕಣಕ್ಕಿಳಿಸಿದೆ . ಕಾಂಗ್ರೆಸ್ ಪಾಳಯದಲ್ಲಿ ಲೆಹರ್ ಸಿಂಗ್ ಗೆ ಆತ್ಮೀಯರು ಇದ್ದಾರೆ ಎಂಬ ಕಾರಣಕ್ಕೆ ಬಿಜೆಪಿ ಈ ಕವಾಯತ್ತು ಮಾಡಿದ್ದು ಸೋಲು ಖಚಿತ ಎಂದು ತಿಳಿದಿದ್ದರೂ ಕಾಂಗ್ರೆಸ್ ತನ್ನ ಎರಡನೇ ಅಭ್ಯರ್ಥಿಯಾಗಿ ಮನ್ಸೂರ್ ಖಾನ್ ಅನ್ನು ಅಖಾಡಕ್ಕಿಳಿಸಿದೆ.

ಜಾತ್ಯತೀತ ಮತಗಳು ವಿಭಜನೆಯಾಗಬಾರದು ಎಂದಿದ್ದರೆ ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ಒಮ್ಮತದಿಂದ ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಬಹುದಿತ್ತು.ಆದರೆ ಕಾಂಗ್ರೆಸ್-ಜೆಡಿಎಸ್ ನ ಕಚ್ಚಾಟದಿಂದ ಬಿಜೆಪಿಯ ಮೂರನೇ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ ಎಂದು ರಾಜಕೀಯ ವಲಯದಲ್ಲಿ ಮಾತುಗಳು ಕೇಳಿಬರುತ್ತಿವೆ.

Join Whatsapp