ನಾಳೆ ಮುಂಗಾರು ಕೇರಳಕ್ಕೆ ಆಗಮನ

Prasthutha|

ನವದೆಹಲಿ : ನಾಳೆ (ಮೇ ೩೧) ನೈಋತ್ಯ ಮುಂಗಾರು ಭಾರತದ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮೇ ೩೧ರಂದು ನೈಋತ್ಯ ಮುಂಗಾರು ಕೇರಳದ ಕರಾವಳಿ ಗ್ರಾಮಕ್ಕೆ ಅಪ್ಪಳಿಸುವ ಪೂರಕ ವಾತಾವರಣ ನಿರ್ಮಾಣವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

- Advertisement -

ಕೆಲವು ದಿನಗಳಿಂದ ತೌಕ್ತೆ, ಯಾಸ್‌ ಚಂಡಮಾರುತದ ಪರಿಣಾಮದಿಂದ ವಿವಿಧ ರಾಜ್ಯಗಳಲ್ಲಿ ಈಗಾಗಲೇ ಸಾಕಷ್ಟು ಮಳೆಯಾಗಿದೆ. ಇದೀಗ ಮುಂಗಾರು ಕೂಡ ಕರಾವಳಿಗೆ ಅಪ್ಪಳಿಸುವ ಪೂರಕ ವಾತಾವರಣ ನಿರ್ಮಾಣವಾಗಿದೆ ಎಂದು ಇಲಾಖೆ ತಿಳಿಸಿದೆ.

ಭಾರತದ ಕೃಷಿ ಚಟುವಟಿಕೆಗಳಿಗೆ ನೈಋತ್ಯ ಮುಂಗಾರು ತನ್ನದೇ ಆದ ಕೊಡುಗೆ ನೀಡುತ್ತದೆ. ದೇಶದ ಶೇ.೫೦ರಷ್ಟು ಕೃಷಿ ಭೂಮಿ ಜೂನ್‌ ನಿಂದ ಸೆಪ್ಟಂಬರ್‌ ತನಕ ಸುರಿಯುವ ಮುಂಗಾರು ಮಳೆಯ ಮೇಲೆ ಅವಲಂಬಿತವಾಗಿದೆ.  

Join Whatsapp