ಮಂಜೇಶ್ವರ: ನೋಡ ನೋಡುತ್ತಿದ್ದಂತೆ ಕುಸಿದು ಬಿದ್ದ ಕಟ್ಟಡ

Prasthutha|

ಮಂಜೇಶ್ವರ: ತೀವ್ರ ಮಳೆಗೆ ಕಟ್ಟಡವೊಂದು ಕುಸಿದುಬಿದ್ದ ಘಟನೆ ವರ್ಕಾಡಿಯಲ್ಲಿ ಸಂಭವಿಸಿದೆ. ಈ ಕಟ್ಟಡ ತೀವ್ರ ಮಳೆಯ ಹಿನ್ನೆಲೆಯಲ್ಲಿ ವಾರದ ಹಿಂದೆಯೇ ಬಿರುಕು ಬಿಟ್ಟಿತ್ತು. ಈ ಹಿನ್ನೆಲೆಯಲ್ಲಿ ಅದರಲ್ಲಿದ್ದವರನ್ನು ಸ್ಥಳಾಂತರಿಸಲಾಗಿತ್ತು. ಹಾಗಾಗಿ ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ.

- Advertisement -

ಕಟ್ಟಡದಲ್ಲಿ ಕೆಲ ವಸತಿ ಕೊಠಡಿಗಳ ಸಹಿತ ವಾಣಿಜ್ಯ ಕೊಠಡಿಗಳು ಇದ್ದವು. ಕಟ್ಟಡದ ಹಿಂಭಾಗದಲ್ಲಿ ಭಾರೀ ಇಳಿಜಾರು ಪ್ರದೇಶವಿದ್ದುದರಿಂದ ತೀವ್ರ ಮಳೆಗೆ ಕಟ್ಟಡ ಕುಸಿದು ಬಿದ್ದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

Join Whatsapp