ಮಂಜೇಶ್ವರದಲ್ಲಿ UDF ಅಭ್ಯರ್ಥಿ ಮುಸ್ಲಿಮ್ ಲೀಗಿನ ಅಶ್ರಫ್ ಕೆ ಎಂ ಜಯಭೇರಿ

Prasthutha|

►ಈ ಬಾರಿಯೂ ಬಿಜೆಪಿ ರಾಜ್ಯಾಧ್ಯಕ್ಷ ಸುರೆಂದ್ರನ್ ಗೆ ಸೋಲು !

- Advertisement -

ಕೇರಳದ ಮಂಜೇಶ್ವರ ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ ಅಭ್ಯರ್ಥಿ ಮುಸ್ಲಿಮ್ ಲೀಗಿನ ಅಶ್ರಫ್ ಕೆ ಎಂ 1200 ಮತಗಳ ಅಂತರದಿಂದ  ನಿರಂತರ ಮುನ್ನಡೆ ಕಾಯ್ದುಕೊಂಡಿದ್ದರು. ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಅವರು ಈ ಬಾರಿಯೂ ಸೋಲುಂಡಿದ್ದಾರೆ.

ಯುಡಿಎಫ್ ಅಭ್ಯರ್ಥಿ ಅಶ್ರಫ್ ಕೆಎಂ 1143 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಈ ಬಾರಿಯ ಬಿಜೆಪಿ ಅಭ್ಯರ್ಥಿ ಸುರೇಂದ್ರನ್ ವಿರುದ್ಧ ಈ ಹಿಂದೆ UDF ಅಭ್ಯರ್ಥಿ ಅಬ್ದುಲ್ ರಝಕ್ 89 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು.ನಂತರ ಅನಾರೋಗ್ಯದಿಂದ ನಿಧನರಾದ ಅಬ್ದುಲ್ ರಝಾಕ್ ಸ್ಥಾನದಲ್ಲಿ UDF ಅಭ್ಯರ್ಥಿ ಎಂ.ಸಿ.ಕಮರುದ್ದೀನ್ ವಿಜಯಿಯಾಗಿದ್ದರು.ಮಂಜೇಶ್ವರ ಕ್ಷೇತ್ರ ಬಿಜೆಪಿ ಗೆಲ್ಲುವ ಸಾಧ್ಯತೆ ಇದೆ ಎಂದು ನಿರೀಕ್ಷೆ ಇಟ್ಟ ಕ್ಷೇತ್ರಗಳಲ್ಲಿ ಒಂದಾಗಿತ್ತು.

Join Whatsapp