ಮಂಜೇಶ್ವರ: ನದಿಯಲ್ಲಿ ಮುಳುಗಿ ವಿದ್ಯಾರ್ಥಿ ಮೃತ್ಯು

Prasthutha|

ಕಾಸರಗೋಡು: ಮಂಜೇಶ್ವರದ ಇಸ್ಲಾಮಿಕ್ ಕಾಲೇಜೊಂದರಿಂದ ಪ್ರವಾಸಕ್ಕೆಂದು ತೆರಳಿದ ವಿದ್ಯಾರ್ಥಿಯೊಬ್ಬ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

- Advertisement -


ಮೃತ ವಿದ್ಯಾರ್ಥಿಯನ್ನು ಉಪ್ಪಳ ಪೈವಳಿಕೆ ನಿವಾಸಿ ಅನ್ಸಾಫ್ ಎಂದು ಗರುತಿಸಲಾಗಿದೆ. ಅನ್ಸಾಫ್ ಅವರು ಮಂಜೇಶ್ವರ ಇಸ್ಲಾಮಿಕ್ ಕಾಲೇಜೊಂದರ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದಾರೆ.


ಸಹಪಾಠಿಗಳೊಂದಿಗೆ ತಮಿಳುನಾಡಿನ ಪ್ರಮುಖ ಝಿಯಾರತ್ ಕೇಂದ್ರಗಳಿಗೆ ಸಂದರ್ಶನಕ್ಕೆಂದು ತೆರಳಿದ್ದ ಅನ್ಸಾಫ್ ಮುತ್ತುಪೇಟೆಯಲ್ಲಿ ಸ್ನಾನಕ್ಕೆಂದು ನದಿಗಿಳಿದ ವೇಳೆ ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿದ್ದಾರೆ.

- Advertisement -


Join Whatsapp