ಮಂಜೇಶ್ವರ: ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಎಸ್.ಡಿ.ಪಿ.ಐ ಧರಣಿ

Prasthutha|

ಮಂಜೇಶ್ವರಂ: ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಎಸ್ ಡಿಪಿಐ ವತಿಯಿಂದ ಮಜೀರ್‌ಪಳ್ಳದಲ್ಲಿ ಧರಣಿ ನಡೆಸಲಾಯಿತು.

- Advertisement -

ಸರಕಾರ ಮತ್ತು ಮಧ್ಯವರ್ತಿಗಳ ನಡುವಿನ ಒಪ್ಪಂದವೇ ಬೆಲೆ ಏರಿಕೆಗೆ ಕಾರಣ. ಜನರನ್ನು ಸಂಕಷ್ಟಕ್ಕೆ ಸಿಲುಕಿಸಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜೇಬು ತುಂಬಿಸಿಕೊಳ್ಳುವುದನ್ನು ತಡೆಯಬೇಕೆಂದು ಎಸ್ ಡಿ ಪಿ ಐ ಜಿಲ್ಲಾ ಕಾರ್ಯದರ್ಶಿ ಸವಾದ್ ಸಿಎ ಆಗ್ರಹಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಪಿ ಐ ಮಂಜೇಶ್ವರಂ ಕ್ಷೇತ್ರದ ಅಧ್ಯಕ್ಷ ಅಶ್ರಫ್ ಬಡಾಜೆ ವಹಿಸಿದ್ದು, ಶರೀಫ್ ಪಾವೂರು, ಇಬ್ರಾಹಿಂ ವೊರ್ಕಾಡಿ, ಮಜೀದ್ ವೊರ್ಕಾಡಿ, ನಾಸರ್ ಬಂಬ್ರಾಣ, ಅಶ್ರಫ್ ಅಝ್ಹರಿ ಮಾತನಾಡಿದರು. ಕ್ಷೇತ್ರ ಕಾರ್ಯದರ್ಶಿ ಆರಿಫ್ ಖಾದರ್ ಸ್ವಾಗತಿಸಿ, ನೌಫಲ್ ಮಿಯಾಪದವ್ ವಂದಿಸಿದರು.



Join Whatsapp