ಮಂಜೇಶ್ವರ ಶಾಸಕರು ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸಲಿ: ಇಕ್ಬಾಲ್ ಹೊಸಂಗಡಿ

Prasthutha|

►ಶಾಸಕರ ಕಚೇರಿಗೆ ಪ್ರತಿಭಟನಾ ಮಾರ್ಚ್ ನಡೆಸಿದ SDPI

- Advertisement -

ಮಂಜೇಶ್ವರ: ಕೇವಲ ಭರವಸೆಗಳನ್ನು ನೀಡಿ, ಯೋಜನೆ ಜಾರಿಯಲ್ಲಿ ಪಕ್ಷಪಾತ ಮಾಡುವ ಮೂಲಕ ಮಂಜೇಶ್ವರ ಶಾಸಕರು ಜನತೆಯನ್ನು ವಂಚಿಸುತ್ತಿದ್ದಾರೆಂದು ಎಸ್.ಡಿ.ಪಿ‌.ಐ ಮಂಜೇಶ್ವರ ಮಂಡಲಾಧ್ಯಕ್ಷ ಅಶ್ರಫ್ ಬಡಾಜೆ ಹೇಳಿದರು.

ಪಕ್ಷದ ವತಿಯಿಂದ ಶಾಸಕರ ಕಚೇರಿಗೆ ನಡೆಸಿದ ಮಾರ್ಚ್ ನಲ್ಲಿ ಅವರು ಮಾತನಾಡಿದರು.

- Advertisement -

ಬೆಳಗ್ಗೆ 11 ಗಂಟೆಗೆ ಉಪ್ಪಳ ಪೇಟೆಯಿಂದ ಆರಂಭವಾದ ಮೆರವಣಿಗೆಯಲ್ಲಿ ಮಹಿಳೆಯರು ಸೇರಿದಂತೆ ನೂರಾರು ಕಾರ್ಯಕರ್ತರು ಭಾಗಿಯಾದರು.

ಜಿಲ್ಲಾ ಉಪಾಧ್ಯಕ್ಷರಾದ ಇಕ್ಬಾಲ್ ಹೊಸಂಗಡಿ ಮಾರ್ಚ್ ಉದ್ಘಾಟಿಸಿ, ಶಾಸಕರು ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಂತೆ ತಿಳಿಸಿದರು. ಈಡೇರಿಲ್ಲವಾದರೆ ಮತ್ತು ಪಕ್ಷಪಾತ ಧೋರಣೆ ಮುಂದುವರಿದರೆ, ಮುಂಬರುವ ಚುನಾವಣೆಯಲ್ಲಿ ಜನತೆ ಸ್ಪಷ್ಟ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದರು.

ಮಂಡಲಾಧ್ಯಕ್ಷ ಅಶ್ರಫ್ ಬಡಾಜೆ ಅಧ್ಯಕ್ಷತೆ ವಹಿಸಿ, ಮಂಜೇಶ್ವರಂ ಬ್ಲಾಕ್ ಪಂಚಾಯತ್ ಸ್ಥಾಯಿ ಸಮಿತಿ ಚೇರ್ಮಾನ್ ಹಮೀದ್ ಹೊಸಂಗಡಿ, ಮಂಡಲಂ ಕಾರ್ಯದರ್ಶಿ ಶಬೀರ್ ಪೊಸೋಟ್, ಕುಂಬಳೆ ಗ್ರಾಮ ಪಂಚಾಯತ್ ಸದಸ್ಯ ಅನ್ವರ್ ಆರಿಕಾಡಿ, ಉಪಾಧ್ಯಕ್ಷ ಶರೀಫ್ ಪಾವೂರು ಮಾತನಾಡಿದರು.

ಕೋಶಾಧಿಕಾರಿ ಅನ್ಸಾರ್ ಗಾಂಧಿ ನಗರ, ಮೀಂಜ ಗ್ರಾಮ ಪಂಚಾಯಿತಿ ಸದಸ್ಯರಾದ ರಝಾಕ್ ಗಾಂಧಿನಗರ ಹಾಗೂ ವಿವಿಧ ಪಂಚಾಯತಿನಿಂದ ಬಂದ ನೇತಾರರಾದ ತಾಜುದೀನ್ ಉಪ್ಪಳ, ನಾಸರ್ ಬಂಬ್ರಾಣ, ಇಕ್ಬಾಲ್ ಕುಂಜತ್ತೂರು, ಮುಸ್ತಫಾ ಕೋಡಿ ಮೊದಲಾದವರು ನೇತೃತ್ವ ವಹಿಸಿದ್ದರು.



Join Whatsapp