ಮಂಜೇಶ್ವರ: ಪಂಚಾಯತ್‌ನ ಹಲವು ಭಾಗಗಳಲ್ಲಿ ಭಾರೀ ಮಳೆ ಮತ್ತು ಗಾಳಿಯಿಂದ ಬೆಳೆ ಹಾನಿಯಾದ ಪ್ರದೇಶಗಳಿಗೆ ಎಸ್.ಡಿ.ಪಿ.ಐ ಮಂಜೇಶ್ವರಂ ಮಂಡಲ ಸಮಿತಿ ಪದಾಧಿಕಾರಿಗಳು, ಮೀಂಜ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ರಝಾಕ್ ಅವರೊಂದಿಗೆ ಭೇಟಿ ನೀಡಿದರು.
ಅತಿವೃಷ್ಠಿಯಿಂದಾಗಿ ಸಂಕಷ್ಟ ಅನುಭವಿಸುತ್ತಿರುವ ಕೃಷಿಕರಿಗೆ ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ತಲುಪಿಸಲು ಎಸ್.ಡಿ.ಪಿ.ಐ ಸಹಕರಿಸಲಿದೆ ಎಂದು ಮಂಡಲಾಧ್ಯಕ್ಷರಾದ ಅಶ್ರಫ್ ಬಡಾಜೆ ತಿಳಿಸಿದರು.
ಮಂಡಲಂ ಸಮಿತಿ ನೇತಾರರಾದ ರಶೀದ್ ಗಾಂಧಿನಗರ, ತಾಜು ಉಪ್ಪಳ, ಫಾರೂಕ್ ಕಳಾಯಿ, ಆರಿಫ್ ಬಾಳಿಯೂರು ಉಪಸ್ಥಿತರಿದ್ದರು.
ಕೃಷಿಕರೇ ಇತ್ತ ಗಮನಿಸಿ….
ಅತಿವೃಷ್ಠಿಯಿಂದಾಗಿ ಬೆಳೆ ನಾಶವಾದವರು ರಾಜ್ಯ ಕೃಷಿ ಇಲಾಖೆಯ ವೆಬ್ ಪೋರ್ಟಲ್ (AIMS) ಮೂಲಕ ಪರಿಹಾರಕ್ಕಾಗಿ ಆನ್‌ಲೈನ್ ಅರ್ಜಿಯನ್ನು ಸಲ್ಲಿಸಬೇಕು. (AIMS) ಪೋರ್ಟಲ್‌ನ ಸಂಪೂರ್ಣ ವಿಳಾಸ www.aims.kerala.gov.in ಆಗಿದೆ. AIMS ಮೊಬೈಲ್ ಅಪ್ಲಿಕೇಶನ್ ಮೂಲಕವೂ ಅರ್ಜಿಗಳನ್ನು ಸಲ್ಲಿಸಬಹುದು.
ರೈತರು ತಮ್ಮ ಅರ್ಜಿಯನ್ನು ಸಲ್ಲಿಸಲು ಮೊದಲು AIIMS ಪೋರ್ಟಲ್ ನೋಂದಣಿ ಐಡಿ ಮತ್ತು ಪಾಸ್‌ವರ್ಡ್ ಬಳಸಿ ಪೋರ್ಟಲ್‌ಗೆ ಲಾಗ್ ಇನ್ ಮಾಡಬೇಕಾಗುತ್ತದೆ. ಇನ್ನೂ ನೋಂದಣಿಯಾಗದ ರೈತರು ಮೊದಲು AIIMS ವೆಬ್ ಪೋರ್ಟಲ್ ಮೂಲಕ ರೈತ ನೋಂದಣಿಯನ್ನು ಮಾಡಬೇಕು ಮತ್ತು ನೋಂದಣಿ ಐಡಿ ಮತ್ತು ಪಾಸ್‌ವರ್ಡ್ ಅನ್ನು ತಯಾರಿಸಿ ನಂತರ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಬೇಕು.
ರೈತರಿಗೆ ಸರ್ಕಾರ ನೀಡುವ ಪರಿಹಾರಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು SDPI ಸಹಾಯ ಕೇಂದ್ರವನ್ನು ಸ್ಥಾಪಿಸಿದೆ.