ಎಸ್‌.ಡಿ.ಪಿ.ಐ ಜಿಲ್ಲಾ ನಾಯಕರ ಸಮ್ಮುಖದಲ್ಲಿ ಮಂಜನಾಡಿ ಬ್ಲಾಕ್ ಸಮಾಗಮ – 2023

Prasthutha|

ಉಳ್ಳಾಲ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ದ.ಕ ಜಿಲ್ಲಾ ಸಮಿತಿ ಕೈಗೊಂಡ ಅಭಿಯಾನವಾದ ಬ್ಲಾಕ್ ಸಮಾಗಮವು ಎಸ್.ಡಿ.ಪಿ.ಐ. ಮಂಜನಾಡಿ ಬ್ಲಾಕ್ ಸಮಿತಿಯ ಅಧೀನದಲ್ಲಿ ಬ್ಲಾಕ್ ಸಮಾಗಮ–2023 ಕಾರ್ಯಕ್ರಮವು ಎಸ್.ಡಿ.ಪಿ.ಐ. ಮಂಜನಾಡಿ ಬ್ಲಾಕ್ ಸಮಿತಿಯ ಅಧ್ಯಕ್ಷರಾದ ನೌಶಾದ್ ಕಿನ್ಯ ರವರ ಅಧ್ಯಕ್ಷತೆಯಲ್ಲಿ ಎಸ್.ಡಿ.ಪಿ.ಐ. ಕ್ಷೇತ್ರ ಸಮಿತಿ ಕಛೇರಿಯಲ್ಲಿ ನಡೆಯಿತು

- Advertisement -

ಮುಖ್ಯ ಅತಿಥಿಗಳಾಗಿ ಎಸ್‌.ಡಿ.ಪಿ.ಐ. ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಜಮಾಲ್ ಜೋಕಟ್ಟೆ, ಜಿಲ್ಲಾ ಕೋಶಾಧಿಕಾರಿಯಾದ ಹನೀಫ್ ರಂತಡ್ಕ , ಎಸ್‌.ಡಿ.ಪಿ.ಐ. ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ ಉಪಾಧ್ಯಕ್ಷ ಫಾರೂಕ್ ಝಲ್ ಝಲ್, ಕ್ಷೇತ್ರ ಸಮಿತಿ ಕಾರ್ಯದರ್ಶಿಗಳಾದ ಉಬೈದ್ ಅಮ್ಮೆಂಬಳ ಆಗಮಿಸಿದ್ದರು.

ಎಸ್.ಡಿ.ಪಿ.ಐ. ದ.ಕ ಜಿಲ್ಲಾ ಕೋಶಾಧಿಕಾರಿ ಹನೀಫ್ ರಂತಡ್ಕ ಬ್ಲಾಕ್ ಸಮಾಗಮದ ಉದ್ದೇಶ ಮತ್ತು ಪಕ್ಷ ಬಲವರ್ಧನೆಯ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿರು

- Advertisement -

ಸಭೆಯನ್ನು ಉದ್ದೇಶಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಜಮಾಲ್ ಜೋಕಟ್ಟೆಯವರು ಪಕ್ಷದ ಕಾರ್ಯ ಚಟುವಟಿಕೆ ಮತ್ತು ಮುಂದಿನ ಯೋಜನೆಗಳ ಬಗ್ಗೆ ವಿವರಿಸಿ ಮಾತನಾಡಿ, ಎಲ್ಲಾ ಪದಾಧಿಕಾರಿಗಳು, ನಾಯಕರು ಪಕ್ಷದ ಪ್ರತಿಯೊಂದು ಚಟುವಟಿಕೆಗಳಲ್ಲಿ ಭಾಗವಹಿಸಿ ಪಕ್ಷವನ್ನು ಬೂತ್ ಮಟ್ಟದಲ್ಲಿ ಸಂಘಟಿಸಿ ಪಕ್ಷವನ್ನು ಬಲಿಷ್ಠಗೊಳಿಸಲು ನಾಯಕರು, ಕಾರ್ಯಕರ್ತರು ಪಣ ತೊಡಗಬೇಕೆಂದು ಕರೆನೀಡಿದರು.

ಈ ಸಂದರ್ಭದಲ್ಲಿ ಮಂಜನಾಡಿ ಬ್ಲಾಕ್ ನ ಪದಾಧಿಕಾರಿಗಳು ಮತ್ತು SDPI ಮಂಜನಾಡಿ, ಕಿನ್ಯ, ತಲಪಾಡಿ, ನರಿಂಗಾನ, ಕೈರಂಗಳ, ಬಾಳೆಪುಣಿ ಗ್ರಾಮ ಸಮಿತಿಯ ನಾಯಕರುಗಳು ಉಪಸ್ಥಿತರಿದ್ದರು

ಎಸ್.ಡಿ.ಪಿ. ಬ್ಲಾಕ್ ಸಮಿತಿ ಅಧ್ಯಕ್ಷರಾದ ನೌಶಾದ್ ಕಿನ್ಯ ಸ್ವಾಗತಿಸಿ, ಬ್ಲಾಕ್ ಕಾರ್ಯದರ್ಶಿ ಇಮ್ತಿಯಾಝ್ ಕಿನ್ಯ ಧನ್ಯವಾದಗೈದರು.

Join Whatsapp