ಮಂಗಳೂರಿನಿಂದ ಭಾರತೀಯ ಏರ್‌ಫೋರ್ಸ್‌ಗೆ ನೆಗೆದ ಧೀರೆ: ರಾಜ್ಯದಿಂದ ಆಯ್ಕೆಯಾದ ಏಕೈಕ ಯುವತಿ

Prasthutha|

ಮಂಗಳೂರು: ಭಾರತೀಯ ಸೇನೆಗೆ ಸೇರಬೇಕು ಎಂಬ ಕನಸಿನೊಂದಿಗೆ ಬದುಕುತ್ತಿದ್ದ ಮಂಗಳೂರು ಯುವತಿ ಮನಿಷಾ ಏರ್ ಫೋರ್ಸ್ ಫ್ಲೈಯಿಂಗ್ ಬ್ರ್ಯಾಂಚ್ ಗೆ ಆಯ್ಕೆಯಾಗಿದ್ದಾಳೆ. ಆ ಮೂಲಕ ಈ ವರ್ಷದಲ್ಲಿ ಫೋರ್ಸ್ ಗೆ ಆಯ್ಕೆಯಾದ ರಾಜ್ಯದ ಏಕೈಕ ಮಹಿಳೆ ಎಂಬ ಪ್ರಶಂಸೆಗೆ ಪಾತ್ರಳಾಗಿದ್ದಾಳೆ.

- Advertisement -

ಅಶೋಕನಗರ ನಿವಾಸಿ ಮತ್ತು  ಭಾರತೀಯ ಸ್ಟೇಟ್ ಬ್ಯಾಂಕ್ ನ ನಿವೃತ್ತ ಅಧಿಕಾರಿ ಮನೋಹರ ಶೆಟ್ಟಿ ಹಾಗೂ ಸರಕಾರಿ ಶಾಲೆ ಮುಖ್ಯೋಪಾಧ್ಯಾಯಿನಿ ಮಾಲತಿ ಶೆಟ್ಟಿ ದಂಪತಿಯ ಪುತ್ರಿ ಮನೀಷಾ, 6ನೇ ತರಗತಿಯಲ್ಲೇ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಉತ್ತಮ ಸಾಧನೆ ಮಾಡಿದ್ದಳು. ರಾಷ್ಟ್ರೀಯ ಬಾಸ್ಕೆಟ್ ಬಾಲ್ ಆಟಗಾರ್ತಿಯಾಗಿ ಎನ್ ಸಿಸಿಯಲ್ಲಿ ಗಣರಾಜ್ಯೋತ್ಸವ ಪರೇಡ್ ಗೆ ಆಯ್ಕೆಯಾಗಿದ್ದರು. ಮನಿಷಾ 6ನೇ ತರಗತಿಯಲ್ಲಿ ಇರುವಾಗಲೇ ಪೈಲಟ್ ಕನಸು ಕಂಡಿದ್ದು ಸದ್ಯ ಆ ಕನಸು ನನಸಾಗಿದೆ

ಏರ್ ಪೋರ್ಸ್ ನ ಪೈಲಟ್ ಗೆ ಆಯ್ಕೆಯಾಗಬೇಕೆಂದು ತಂದೆಯ ಕನಸಾಗಿತ್ತು. ಅದರಂತೆ ಈ ಹಿಂದೆ ಆರ್ಮಿ, ನೇವಿಗೂ ಆಯ್ಕೆಯಾಗಿದ್ದರು ಮನಿಷಾ ನಯವಾಗಿ ಅದರಿಂದ ಹಿಂಜರಿದರು. ಪೈಲಟ್ ಆಗುವ ಇಚ್ಛೆಯಿಂದ ಏರ್ ಪೋರ್ಸ್ ಪ್ರಯತ್ನ ಮತ್ತೆ ಮುಂದುವರಿಸಿದರು. ಕೊನೆಗೂ ತಂದೆ ಮಗಳ ಇಚ್ಛೆಯಂತೆ ಆ ಕನಸು ಈಡೇರಿದೆ.

- Advertisement -

ಮನೀಷಾ , ಬಿಜೈ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ಮತ್ತು ಸೈಂಟ್ ಅಲೋಶಿಯಸ್‌ನಲ್ಲಿ ಪ್ರಾಥಮಿಕ, ಪ್ರೌಢ ಮತ್ತು ಪಿಯುಸಿ ವಿದ್ಯಾಭ್ಯಾಸ ಪೂರೈಸಿ ಬೆಂಗಳೂರಿನ ರಾಮಯ್ಯ ಕಾಲೇಜಿನ ಬಿಇ ಪದವಿ ಪಡೆದಿದ್ದಾಳೆ.



Join Whatsapp