ಮಣಿಪುರ ಬೆತ್ತಲೆ ಮೆರವಣಿಗೆ ಪ್ರಕರಣ: 4 ಆರೋಪಿಗಳಿಗೆ 11 ದಿನ ಪೊಲೀಸ್ ಕಸ್ಟಡಿ

Prasthutha|

ಇಂಫಾಲ: ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ನಾಲ್ಕು ಆರೋಪಿಗಳಿಗೆ ನ್ಯಾಯಾಲಯ 11 ದಿನ ಪೊಲೀಸ್ ಕಸ್ಟಡಿ ವಿಧಿಸಿದೆ.

- Advertisement -


ಇಂದು ಈ ನಾಲ್ಕು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಎಲ್ಲ ನಾಲ್ಕು ಆರೋಪಿಗಳಿಗೆ ನ್ಯಾಯಾಲಯ 11 ದಿನಗಳ ಕಾಲ ಪೊಲೀಸ್ ಕಸ್ಟಡಿ ವಿಧಿಸಿದೆ.

ರಾಜಧಾನಿ ಇಂಫಾಲದಿಂದ ಸುಮಾರು 35 ಕಿಮೀ ದೂರದಲ್ಲಿರುವ ಕಾಂಗ್ ಪೋಕ್ಪಿ ಜಿಲ್ಲೆಯಲ್ಲಿ ಮೇ 4 ರಂದು ಜನರ ಗುಂಪೊಂದು ಮಹಿಳೆಯರನ್ನು ಥಳಿಸಿ ಬೆತ್ತಲೆಗೊಳಿಸಿ ಅವರನ್ನು ಮೆರವಣಿಗೆ ಮಾಡಿದ್ದು ಮಾತ್ರವಲ್ಲದೇ ಸಾಮೂಹಿಕ ಅತ್ಯಾಚಾರವೆಸಗಿದ್ದರು.



Join Whatsapp